ಮಂಗಳೂರಿನ wizdom institutions network ಶೈಕ್ಷಣಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ ಫ್ರಾನ್ಸಿಸ್ಕ್ಯಾ ತೇಜ್ ಹಾಗೂ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್ CAO ಡಾ ಗುರುತೇಜ್ ಇವರುಗಳು ವಿಸ್ಡಮ್ ಶೈಕ್ಷಣಿಕ ಸಂಸ್ಥೆಯ ಸಿ ಇ ಓ ಅಭಿಲಾಷ್ ಕ್ಷತ್ರಿಯ, ಕಾಸರಗೋಡು ಕನ್ನಡ ಭವನಕ್ಕೆ ಭೇಟಿ ನೀಡಿದರು.
ಕನ್ನಡ ಭವನದ ಪುಸ್ತಕ ಸಂಗ್ರಹ, ವಾಚನಾಲಾಯ, ಪ್ರಾಚ್ಯ ವಸ್ತು ಶೇಖರ, ಹಳೆಯ ನಾಣ್ಯ, ಸಂಗ್ರಹ, ಇತ್ಯಾದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರಲ್ಲಿ ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ತಮ್ಮ ವಿಸ್ಡಮ್ ಸಂಸ್ಥೆಯ ಶಾಖೆಯೊಂದನ್ನು ಕಾಸರಗೋಡಲ್ಲಿ ಸ್ಥಾಪಿಸಿ, ವಿದ್ಯಾರ್ಥಿಗಳ, ಉಪರಿ ಪಠಣ, ಹಾಗೂ ಉದ್ಯೋಗ ಅವಕಾಶಕ್ಕಿರುವ, ವಿವಿಧ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕೆಂಬ ವಿನಂತಿಯನ್ನು ಮುಂದಿರಿಸಿದೆವು.
ಸಾಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ವಿಸ್ಡಮ್ ಸಂಸ್ಥೆಯ ವ್ಯವಸ್ಥಾಪಕರಾದ, ಡಾ. ಫ್ರಾನ್ಸಿಸ್ಕ್ಯಾ ತೇಜ್ ಹಾಗೂ ಡಾ. ಗುರುತೇಜ್ ಇವರನ್ನು ಕನ್ನಡ ಭವನವು ಸ್ಮರಣಿಕೆ, ಪುಸ್ತಕ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿತು. ನಗರದ ಬಿ ಇ ಎಂ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಸರ್, ನಿವ್ರಿತ್ತ ಕೆ ಎಸ್ ಆರ್ ಟಿ ಸಿ ಡಿವಿಷನಲ್ ಇಂಜಿನಿಯರ್ ಪ್ರಕಾಶಚಂದ್ರ ಅನಂಗೂರ್, ಉಪಸ್ಥಿತರಿದ್ದರು. ವಾಮನ್ ರಾವ್ ಬೇಕಲ್ ಸನ್ಮಾನಿಸಿ, ಸಂದ್ಯಾ ರಾಣಿ ಟೀಚರ್ ವಂದಿಸಿದರು.