ಕೊಕ್ಕಡ: ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಜುಲೈ 9 ರಂದು ಭಾರತೀಯ ಮಜ್ದೂರ್ ಸಂಘದ, ಅಖಿಲ ಭಾರತೀಯ ಸಂಘಟನ ಕಾರ್ಯದರ್ಶಿ ಬಿ ಸುರೇಂದ್ರನ್ , ರಾಜ್ಯ ಪ್ರಧಾನಕಾರ್ಯದರ್ಶಿ ಎಚ್ ಎಲ್ ವಿಶ್ವನಾಥ್ ಮತ್ತು ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಇವರು ಭೇಟಿ ನೀಡಿ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು.