ವಿಟ್ಲ: ಹುಲಿ ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ವಿಟ್ಲ ಕಸಬಾ ಗ್ರಾಮದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ (55) ನಾಪತ್ತೆಯಾದವರು. ಸುಂದರ ನಾಯ್ಕ್‌ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ಅದೇ ರೀತಿ ಅ.1ರಂದು ಬೆಳಿಗ್ಗೆ ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ. ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯಲು ಇದೆ ಎಂದು ಹೇಳಿದ್ದರೆನ್ನಲಾಗಿದೆ.
ಹಬ್ಬ ಇರುವುದರಿಂದ ಹಬ್ಬ ಮುಗಿದ ಬಳಿಕ ಮನೆಗೆ ಬರಬಹುದೆಂದು ಭಾವಿಸಿದ್ದು, ಆದರೆ ಈವರೆಗೂ ಮನೆಗೆ ಬಾರದೆ ಇರುವುದರಿಂದ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿ, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸುಂದರ ನಾಯ್ಕರ ಪತ್ನಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.