Tuesday, December 3, 2024
HomeUncategorizedವಿಧಾನ ಪರಿಷತ್‌ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳದ ವಿವಿದೆಡೆ ಸಭೆ

ವಿಧಾನ ಪರಿಷತ್‌ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳದ ವಿವಿದೆಡೆ ಸಭೆ

ಕಾರ್ಕಳ : ವಿಧಾನ ಪರಿಷತ್‌ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಿಟ್ಟೆ, ನಂದಳಿಕೆ, ಬೋಳ, ಕೆದಿಂಜೆ, ಬೆಳ್ಮಣ್‌, ದುರ್ಗಾ ಇನ್ನಾ ಹಾಗೂ ಮುಂಡ್ಕೂರು ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯತ್‌ ಸದಸ್ಯರೊಂದಿಗೆ ಚುನಾವಣೆ ಕಾರ್ಯತಂತ್ರದ ಕುರಿತು ಚರ್ಚಿಸಲಾಯಿತು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಭಾರತೀಯ ಜನತಾ ಪಾರ್ಟಿಯು ಈ ಬಾರಿ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಕಿಶೋರ್ ಕುಮಾರ್ ಪುತ್ತೂರು ಇವರಿಗೆ ತಮ್ಮ ಅಮೂಲ್ಯ ಮತವನ್ನು ನೀಡುವ ಮುಖಾಂತರ ಅವರನ್ನು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುದರೊಂದಿಗೆ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬಲು ಸಹಕರಿಸಬೇಕೆಂದು ಗ್ರಾಮ
ಪಂಚಾಯತ್‌ ಸದಸ್ಯರುಗಳಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ್‌ ಶೆಟ್ಟಿ, ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಬೋಳ ಸತೀಶ್‌ ಪೂಜಾರಿ, ಮಂಡಲ ಉಪಾಧ್ಯಕ್ಷರಾದ ಅನಂತಕೃಷ್ಣ ಶೆಣೈ, ರವೀಂದ್ರ ಶೆಟ್ಟಿ ಮುಲ್ಲಡ್ಕ, ಸತೀಶ್‌ ನಾಯಕ್‌, ಮಹೇಶ್‌ ರಾವ್‌ ದುರ್ಗ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular