ಪಠ್ಯ ಪೂರಕ ಮತ್ತು ಸಹಪಠ್ಯ ಚಟುವಟಿಕೆಗಳು ವಿದ್ಯಾಭಾರತಿ ಕರ್ನಾಟಕದಿಂದ ಉತ್ತಮವಾಗಿ ಮಾಡಲ್ಪಡುತ್ತಿದೆ. ಸೌಹಾರ್ದಯುತ , ಆರೋಗ್ಯವಾದ ವಾತಾವರಣವನ್ನು ಮಾಡಿಕೊಡುತ್ತಿದೆ . ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಸ್ಪರ್ಧಾಳುಗಳನ್ನು ನೋಡಿ ,ನಿಮ್ಮ ಕ್ರೀಡಾ ಮನೋಭೂಮಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪಿ.ಆರ್.ಎನ್.ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಸಂಚಾಲಕರು ರಾಜೇಶ್ ನಾಯಕ್ ಹೆಬ್ರಿ ನುಡಿದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಪ್ರಾಂತ ಮಟ್ಟದ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಗಸ್ಟ್ 24 ಶನಿವಾರ ಕಾರ್ಯಕ್ರಮ ಜರುಗಿದೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ , ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ್ ಶೆಟ್ಟಿ , ಅಮೃತ ಭಾರತಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಅಪರ್ಣ ಆಚಾರ್ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶಕುಂತಲಾ ,ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಉಪಸ್ಥಿತರಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹೆಗ್ಡೆ ಸ್ವಾಗತಿಸಿದರು , ಬಹುಮಾನಿತರ ಪಟ್ಟಿಯನ್ನು ವಿದ್ಯಾಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ಶೆಟ್ಟಿ ವಾಚಿಸಿದರು.ಧನ್ಯವಾದ ದೈಹಿಕ ಶಿಕ್ಷಣ ಶಿಕ್ಷಕಿ ಮಾಲಿನಿ , ಅಕ್ಷತಾ ಅಜೆಕಾರ್ ನಿರೂಪಿಸಿದರು.
ಫಲಿತಾಂಶ :
ತರುಣ ವರ್ಗ ಬಾಲಕರ ತಂಡ :
ಪ್ರಥಮ: ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆ. ದ್ವಿತೀಯ ಉಡುಪಿ ಜಿಲ್ಲೆ.
ಬಾಲಕಿಯರು : ಪ್ರಥಮ: ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ: ಕಲಬುರ್ಗಿ ಜಿಲ್ಲೆ.
ಕಿಶೋರ ವರ್ಗ ಬಾಲಕರ ತಂಡ : ಪ್ರಥಮ ಸ್ಥಾನ : ಹಾಸನ ಜಿಲ್ಲೆ.
ದ್ವಿತೀಯ ಸ್ಥಾನ : ದಕ್ಷಿಣ ಕನ್ನಡ ಜಿಲ್ಲೆ .
ಬಾಲಕಿಯರು : ಪ್ರಥಮ ಸ್ಥಾನ :ದಕ್ಷಿಣ ಕನ್ನಡ ಜಿಲ್ಲೆ
ದ್ವಿತೀಯ ಸ್ಥಾನ : ಬೆಂಗಳೂರು ಜಿಲ್ಲೆ
ಬಾಲ ವರ್ಗ : ಬಾಲಕರು : ಪ್ರಥಮ ಸ್ಥಾನ : ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ : ಹಾಸನ ಜಿಲ್ಲೆ .
ಬಾಲಕಿಯರು : ಪ್ರಥಮಸ್ಥಾನ : ದಕ್ಷಿಣ ಕನ್ನಡ ಜಿಲ್ಲೆ. ದ್ವಿತೀಯ ಸ್ಥಾನ : ಬೆಂಗಳೂರು ಜಿಲ್ಲೆ