ಎಸ್ ಎಂ ಫ್ರೆಂಡ್ಸ್ ಸುಲ್ಕೇರಿ ಮೂಗೇರು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಊರಿನ ಗ್ರಾಮಸ್ಥರಿಗೆ ವಾಲಿಬಾಲ್ ಪಂದ್ಯಾಟವು ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು. ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿಭಟ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದಿಶಾಂತ್ ಮಿತ್ತ ಮಾರು, ವೆಂಕಪ್ಪ ಪೂಜಾರಿ ಕಂಬುಲ ಓಟಗಾರ ಸತೀಶ್ ದೇವಾಡಿಗ ರಾಜೇಶ್ ಕುಲಾಲ್ ಬೈರೊಟ್ಟು ಅಧ್ಯಕ್ಷರು ತುಳು ನಾಡು ಒಕ್ಕೂಟ ಬೆಳ್ತಂಗಡಿ ಬಾಬು ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟದ ವತಿಯಿಂದ ಪ್ರಸಾದ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು .
ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕ್ರೀಡಾಕೂಟದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಸ್ವಾಗತ ಮತ್ತು ಧನ್ಯವಾದ ನಂದನ್ ರವರು ನೆರವೇರಿಸಿದರು.