Monday, May 19, 2025
Homeಅಪರಾಧಕಾಂಗ್ರೆಸ್ ಪರ ಮತ ಯಾಚನೆ: ಡೀಪ್ ಫೇಕ್ ವಿಡಿಯೊ ಬಗ್ಗೆ ನಟ ರಣವೀರ್ ಸಿಂಗ್ ದೂರು

ಕಾಂಗ್ರೆಸ್ ಪರ ಮತ ಯಾಚನೆ: ಡೀಪ್ ಫೇಕ್ ವಿಡಿಯೊ ಬಗ್ಗೆ ನಟ ರಣವೀರ್ ಸಿಂಗ್ ದೂರು

ಮುಂಬೈ: ಪಕ್ಷವೊಂದರ ಪರವಾಗಿ ಮತ ಚಲಾಯಿಸುವ ಡೀಪ್ ಫೇಕ್ ವಿಡಿಯೊ ವೈರಲ್ ಆಗಿರುವ ಬಗ್ಗೆ ನಟ ರಣವೀರ್ ಕಪೂರ್ ದೂರು ನೀಡಿದ್ದಾರೆ. ಎಐ ರಚಿತ ಡೀಪ್ ಫೇಕ್ ವಿಡಿಯೊದಲ್ಲಿ ರಣವೀರ್ ಕಾಂಗ್ರೆಸ್ ಪರವಾಗಿ ಮತ ಯಾಚಿಸಿರುವಂತೆ ವಿಡಿಯೊ ಮಾಡಲಾಗಿತ್ತು. ರಣವೀರ್ ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದ ಸಂದರ್ಭದ ವಿಡಿಯೊ ಎಡಿಟ್ ಮಾಡಿ ಡೀಪ್ ಫೇಕ್ ವಿಡಿಯೊ ಮಾಡಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ರಣವೀರ್ ಸಿಂಗ್ ಅವರ ವಕ್ತಾರರು ಪೊಲೀಸ್ ದೂರು ದಾಖಲಿಸಿದ್ದಾರೆ. ಮುಂಬೈ ಪೊಲೀಸರ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ. ನಟ ಆಮಿರ್ ಖಾನ್, ನಟ ಅಲ್ಲು ಅರ್ಜುನ್ ಮತ ಯಾಚನೆ ಮಾಡುವಂತೆ ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.

RELATED ARTICLES
- Advertisment -
Google search engine

Most Popular