Sunday, July 14, 2024
Homeಮಂಗಳೂರುಸೇತುವೆಯಿಲ್ಲದ ಕಾರಣ ದೋಣಿಯಲ್ಲಿ ಬಂದು ಮತದಾನ ಮಾಡಿದ ದ್ವೀಪದ ಮತದಾರರು

ಸೇತುವೆಯಿಲ್ಲದ ಕಾರಣ ದೋಣಿಯಲ್ಲಿ ಬಂದು ಮತದಾನ ಮಾಡಿದ ದ್ವೀಪದ ಮತದಾರರು

ಮಂಗಳೂರು: ಸಂಪರ್ಕ ಸೇತುವೆಯಿಲ್ಲದೆ ಪರದಾಡುತ್ತಿರುವ ದ್ವೀಪವೊಂದರ ಜನರು ಇಂದು ದೋಣಿ ಮೂಲಕ ಬಂದು ಮತದಾನ ಮಾಡಿದ್ದಾರೆ. ತಮ್ಮ ಪ್ರದೇಶಕ್ಕೆ ಸೇತುವೆ ಕಲ್ಪಿಸದ ರಾಜಕಾರಣಿಗಳ ಬಗ್ಗೆ ಅಸಹನೆ ಹೊಂದಿದ್ದರೂ, ಇನ್ನಾದರೂ ತೂಗು ಸೇತುವೆಯಾದರೂ ನಿರ್ಮಾಣವಾಗಬಹುದು ಎಂಬ ಆಶಾಭಾವನೆಯಿಂದ ಮತ ಚಲಾಯಿಸಿದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಪಾವೂರು ಉಳಿಯ ದ್ವೀಪದ ಜನರು ಹಲವು ವರ್ಷಗಳಿಂದ ಬೋಟ್ ಮೂಲಕವೇ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ದೈನಂದಿನ ಚಟುವಟಿಕೆಗಳಿಗೆ ನಗರ ಪ್ರದೇಶಕ್ಕೆ ಬರಲೂ ಇವರು ದೋಣಿಯನ್ನೇ ಅವಲಂಬಿಸಬೇಕಾಗಿದೆ. ಆದರೂ ಇದನ್ನೆಲ್ಲಾ ಮನಸ್ಸಲ್ಲಿಟ್ಟುಕೊಳ್ಳದೆ ಇಂದು ದೋಣಿಯಲ್ಲೇ ಬಂದು ಮತದಾನ ಮಾಡಿದ್ದಾರೆ. ಹಲವು ವರ್ಷಗಳಿಂದ ಇಲ್ಲಿನ ಜನ ಸೇತುವೆಯಿಲ್ಲದೆ ಪರದಾಡುತ್ತಿದ್ದಾರೆ. ಸೇತುವೆಗಾಗಿ ಜನಪ್ರತಿನಿಧಿಗಳಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅವರು ಬೇಡಿಕೆಗೆ ಸ್ಪಂದಿಸಿಲ್ಲ. ಈ ದ್ವೀಪ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, 150ಕ್ಕೂ ಹೆಚ್ಚು ಮತದಾರರಿದ್ದಾರೆ.

RELATED ARTICLES
- Advertisment -
Google search engine

Most Popular