Saturday, July 20, 2024
Homeರಾಜಕೀಯಜೇಸಿಐ ಉಪ್ಪುಂದ ಸುಪ್ರೀಮ್ ವತಿಯಿಂದ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

ಜೇಸಿಐ ಉಪ್ಪುಂದ ಸುಪ್ರೀಮ್ ವತಿಯಿಂದ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ

ಬೈಂದೂರು : ಜೇಸಿಐ ಉಪ್ಪುಂದ ಸುಪ್ರೀಮ್ ವತಿಯಿಂದ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಜೇಸಿ ವಲಯ ತರಬೇತಿದಾರ ಅನಿತಾ ನರೇಂದ್ರ ಕೋಟ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದ್ದು 18 ವರ್ಷ ದಾಟಿದ ಎಲ್ಲರೂ ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದ ಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.

ಜೇಸಿಐ ಉಪ್ಪುಂದ ಸುಪ್ರೀಮ್ ಅಧ್ಯಕ್ಷ ಸುಮಾ ಆಚಾರ್ ಮತದಾನ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಲತಾ ಪೂಜಾರಿ, ಜೇಸಿಐ ಉಪ್ಪುಂದ ಸುಪ್ರೀಮ್ ಜ್ಯೂನಿಯರ್ ಜೇಸಿ ಸದಸ್ಯೆ ಪಂಚಮಿ ಆಚಾರ್, ಗೌತಮಿ ಆಚಾರ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

RELATED ARTICLES
- Advertisment -
Google search engine

Most Popular