ಬೈಂದೂರು : ಜೇಸಿಐ ಉಪ್ಪುಂದ ಸುಪ್ರೀಮ್ ವತಿಯಿಂದ ಜಿಲ್ಲಾಡಳಿತ ಹಾಗೂ ಎಸ್.ವಿ.ಇ.ಇ ಪಿ ಸಮಿತಿ, ಗ್ರಾಮ ಪಂಚಾಯತ್ ಉಪ್ಪುಂದ ಸಹಯೋಗದೊಂದಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಅಂಗವಾಗಿ ಉಪ್ಪುಂದ ಸುಮುಖ ಸರ್ಜೀಕಲ್ ಸಿಬ್ಬಂದಿಗಳಿಗೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಉಪ್ಪುಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುದರ್ಶನ ಅವರು ಮತದಾನ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿ, ನಿಮ್ಮ ಮತ ನಿಮ್ಮ ಹಕ್ಕಾಗಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ತಮಗೆ ಸೂಕ್ತ ಎನಿಸಿದ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಬಲವರ್ಧನೆಗೆ ಸಹಕಾರ ನೀಡಬೇಕು ಎಂದರು.
ಜೇಸಿಐ ಉಪ್ಪುಂದ ಸುಪ್ರೀಮ್ ಅಧ್ಯಕ್ಷ ಸುಮಾ ಆಚಾರ್ ಮತದಾನ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿದ್ದರು.
ಉಪ್ಪುಂದ ಸುಮುಖ ಸರ್ಜೀಕಲ್ ಮುಖ್ಯಸ್ಥ ಬಿ.ಎಸ್ ಸುರೇಶ್ ಶೆಟ್ಟಿ, ಉಪ್ಪುಂದ ಸಮುಖ ಸರ್ಜೀಕಲ್ ಫ್ಯಾಕ್ಟರಿ ಎಚ್.ಆರ್ ಜಯಶೇಖರ್ ಮಟಪಾಡಿ, ಗ್ರಾಮ ಪಂಚಾಯತ್ ಉಪ್ಪುಂದ ಕಾರ್ಯದರ್ಶಿ ಗಿರಿಜಾ, ಜೇಸಿಐ ಉಪ್ಪುಂದ ಸುಪ್ರೀಮ್ ಸದಸ್ಯೆ ಸುಗುಣ ಆಚಾರ್, ಜೇಸಿಐ ಉಪ್ಪುಂದ ಸುಪ್ರೀಮ್ ಜ್ಯೂನಿಯರ್ ಜೇಸಿ ಸದಸ್ಯೆ ಪಂಚಮಿ ಆಚಾರ್ ಹಾಗೂ ಉಪ್ಪುಂದ ಸುಮುಖ ಸರ್ಜೀಕಲ್ ಸಿಬ್ಬಂದಿ ಅಭಿಯಾನದಲ್ಲಿ ಉಪಸ್ಥಿತರಿದ್ದರು.