ವಯೋವೃದ್ಧೆಯಿಂದ ಮತ ಚಲಾವಣೆ

0
153

ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಬಡಾಕೆರೆ ಮತಗಟ್ಟೆ ಸಂಖ್ಯೆ 112‌ರಲ್ಲಿ ಪದ್ಮಾವತಿ ಆಚಾರ್ಯ ಎನ್ನುವ 90 ವರ್ಷ ಪ್ರಾಯದ ವಯೋವೃದ್ಧೆ.ತಮ್ಮ ಮಗಳ ಸಹಾಯವನ್ನು ಪಡೆದು ಕೊಂಡು ಮತ ಕೇಂದ್ರಕ್ಕೆ ತೆರಳಿ ಮತ ಚಲಾವಣೆ ಮಾಡುವುದರ ಮೂಲಕ ಮತದಾನದ ಬಗ್ಗೆ ಮಹತ್ವ ಸಾರಿದ್ದಾರೆ.

ಪದ್ಮಾವತಿ ಆಚಾರ್ಯ ಎನ್ನುವ ಅಜ್ಜಿ ಮನೆಗೆ ಯಾವುದೇ ರೀತಿಯ ಸಂಪರ್ಕ ರಸ್ತೆ ಇಲ್ಲಾ. ಮತ ಹಾಳಾಗಬಾರದು ಎನ್ನುವ ಉದ್ದೇಶದಿಂದ ಅವರ ಮಗಳಾದ ಕಮಲ ಆಚಾರ್ಯ ಅವರು ತಮ್ಮ ತಾಯಿಯನ್ನು ಹೊತ್ತು ಕೊಂಡು ಬಂದು ಮತವನ್ನು ಚಲಾಯಿಸಿದ್ದಾರೆ.ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here