ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಸಂಸ್ಥೆಯ ಮುಂದಾಲತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಪರಮ ಪಾದದಿಂದ ಮೂಲ ಪಾಡದೆಡೆಗೆ ಸುಭಿಜ್ಞಾ ಸಮಾಜದ ಗುರಿಯೊಂದಿಗೆ ನಡೆಯುವ 6ನೇ ವರ್ಷದ ಭಕ್ತ ಜನರ “ಭಕ್ತಿ ಧರ್ಮದ ನಡೆ” ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವಿಧ್ಯೇಂದ್ರ ತೀರ್ಥ ಶ್ರೀ ಪಾದರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ತಾಯಿ ಜಗನ್ಮಾತೆಯ ಎರಡು ದಿವ್ಯ ಸಾನಿಧ್ಯವನ್ನು ಪಾದಯಾತ್ರೆಯ ಮೂಲಕ ಜೋಡಿಸಿರುವ ಮಂಜಣ್ಣ ಸೇವಾ ಬ್ರಿಗೇಡಿನ ಕಾರ್ಯವನ್ನು ಹಾಗೂ ಭಕ್ತಿ ಧರ್ಮದ ನಡೆಯೊಂದಿಗೆ ಸೇವಾ ಕಾರ್ಯವನ್ನು ಶ್ಲಾಘಿಸಿ ಆಶೀರ್ವದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿತೇಶ್ ತೋಕೂರು ಸಂಸ್ಥೆಯು ಆರಂಭದಿಂದ ಇಂದಿನವರೆಗೆ ಮಾಡಿಕೊಂಡು ಬಂದಿರುವ ಸೇವಾ ಕಾರ್ಯಗಳ ಬಗ್ಗೆ, ದಿ.ಮಂಜುನಾಥ್ ಮಂಗಳೂರು ಅವರ ಆಸೆಯಂತೆ ತಮ್ಮವರ ಬಾಳು ಅಸನಾಗಿಸುವ ನಿಟ್ಟಿನಲ್ಲಿ ಸಂಸ್ಥೆ ನಡೆದುಬಂದ ದಾರಿ ಹಾಗೂ ಸೇವೆಯೇ ಜೀವನ ಆ ಸೇವಾ ಕಾರ್ಯದಿಂದ ನಮ್ಮ ಜೀವನ ಪಾವನವಾಗಿದೆ ಎಂಬ ಸದಸ್ಯರ ಮನದಾಳದ ಮಾತನ್ನು ವಿವರಿಸಿದರು.
ನಂತರ ಮಾತನಾಡಿದ ಮುಲ್ಕಿ ಸೀಮೆಯ ಅರಸರು ಹಾಗೂ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರರಾದ ಶ್ರೀ ದುಗ್ಗಣ್ಣ ಸಾವಂತರು ಮಾತನಾಡಿ ಧರ್ಮ ರಕ್ಷಣೆಯಲ್ಲಿ ಬ್ರಿಗೇಡಿನ ಕಾರ್ಯವೈಖರಿ ಹಾಗೂ ಸೇವಾ ಕಾರ್ಯಗಳಲ್ಲಿ ಸಂಸ್ಥೆಯು ಮಾಡುವಂತಹ ಸಹಾಯಾರ್ಥ ಹಿಂದೂ ಸಮಾಜದ ಕಷ್ಟಕ್ಕೆ ಸಹಾಯಕವಾಗಿದೆ ಮುಂದೆಯೂ ಸೇವೆ ನಿರಂತರವಾಗಿರಲಿ ಎಂಬ ಶುಭಾಶಿರ್ವಾದ ತಿಳಿಸಿದರು.
ದಿವಂಗತ ಮಂಜುನಾಥ್ ಮಂಗಳೂರುರವರು ತನ್ನ ಜೀವಿತಾವಧಿಯಲ್ಲಿ ಹಿಂದುತ್ವಕ್ಕಾಗಿ, ಸಂಘಟನೆಗಾಗಿ ಮತ್ತು ಹಿಂದುತ್ವಕ್ಕಾಗಿ ದುಡಿದ ಕಾರ್ಯಕರ್ತರ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿ ಹಾಗೂ ಅವರ ಜೊತೆಗಿದ್ದವರ ಒಡನಾಟದ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರು ವಕೀಲರದಂತಹ ಶ್ರೀಯುತ ಕಿಶೋರ್ ಕುಮಾರ್ ರವರು ಅಧ್ಯಕ್ಷೀಯ ಮಾತುತಳನ್ನು ಸಭೆಯ ಮುಂದಿಟ್ಟರು.
6ನೇ ವರ್ಷದ ಪಾದಯಾತ್ರೆಯ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನೆಯನ್ನು ಶ್ರೀ ಶ್ರೀ ಶ್ರೀ ವಿಧ್ಯೇಂದ್ರ ತೀರ್ಥ ಶ್ರೀಪಾದರು ಚಿತ್ರಾಪುರ ದೇವಸ್ಥಾನ ಹಾಗೂ ಚಿತ್ರಾಪುರ ಮಠ ಸ್ವಾಮಿಗಳು ನೀಡಿದರು.
ಮುಖ್ಯ ಅತಿಥಿಗಳಾಗಿ: ದುಗ್ಗಣ್ಣ ಸಾವಂತರು ಮುಲ್ಕಿ ಸೀಮೆ ಅರಸರು, ಜಯರಾಮ್ ಶೆಟ್ಟಿ ಗುತ್ತಿನಾರ್ ಕುಡುಂಬೂರು ಗುತ್ತು ಶ್ರೀ ಕ್ಷೇತ್ರ ಕಣಿಲ,ಮಾಧವ ಸುವರ್ಣ ತೋಕೂರು ಸ್ವಾಮಿ ಕೊರಗಜ್ಜ ಸನ್ನಿಧಿ,ರಮೇಶ್ ರಾವ್ ಸ್ಥಾಪಕರು ಪೆರ್ಮುದೆ ಹಿಂದೂ ಅನುದಾನಿತ ಹಿರಿಯ ಪ್ರಾರ್ಥಮಿಕ ಶಾಲೆ ಕೋಡಿಕೆರೆ,ಪದ್ಮನಾಭ ಸುವರ್ಣ ಮೊಕ್ತೇಸರರು ಚಿತ್ರಾಪುರ ಶ್ರೀ ಮಹಾಕಾಳಿ ದೈವಸ್ಥಾನ, ಕಿಶೋರ್ ಕುಮಾರ್ ವಕೀಲರು, ಪ್ರಮುಖರು ಹಿಂದೂ ಜಾಗರಣ ವೇದಿಕೆ,ಮನೋಜ್ ಕೋಡಿಕೆರೆ ಸ್ಥಾಪಕರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು, ವೈಶಾಕ್ ಕುಳಾಯಿ ಸುರತ್ಕಲ್ ಪ್ರಖಂಡ ಬಜರಂಗದಳ ಗೋರಕ್ಷಾ ಪ್ರಮುಖ್,ಪುರುಷೋತ್ತಮ್ ಬಂಗೇರ ಕಾಟಿಪಳ್ಳ ಪ್ರಮುಖರು ಹಿಂದೂ ಯುವ ಸೇನೆ,ಮಧುಸೂಧನ್ ಉರ್ವಸ್ಟೋರ್ ಪ್ರಮುಖರು ಶ್ರೀ ರಾಮಸೇನೆ, ಗಣೇಶ್ ಹೊಸಬೆಟ್ಟು ಮಾಜಿ ಮೇಯರ್ ಮಂಗಳೂರು ಮಹಾನಗರ ಪಾಲಿಕೆ,ವೇದಾವತಿ ಮಾಜಿ ಉಪ ಮೇಯರ್, ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ ಉಪಸ್ಥಿತರಿದ್ದರು.
ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟಿನ ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಹರೀಶ್ ಸಫಲ್ಯ
ಅಧ್ಯಕ್ಷರಾಗಿ ರಂಜಿತ್ ಶೆಟ್ಟಿ ಕಾರ್ಯದರ್ಶಿಯಾಗಿ ಗಂಗಾಧರ್ ಶೆಟ್ಟಿ ಜೊತೆ ಕಾರ್ಯದರ್ಶಿಯಾಗಿ ಆದಿ ನೇತಾಜಿ ನಗರ ಕೋಶಾಧಿಕಾರಿಯಾಗಿ ರೇವಂತ್ ಮಂಗಳೂರು ಜೊತೆ ಕೋಶಾಧಿಕಾರಿಯಾಗಿ ಕೀರ್ತನ್ ಆಳ್ವ ಉಪಾಧ್ಯಕ್ಷರಾಗಿ ಲಕ್ಷ್ಮೀಶ್ ಕೋಡಿಕೆರೆ ಮಾದ್ಯಮ ಪ್ರಮುಖರಾಗಿ ನಾಗೇಶ್ ಶೆಟ್ಟಿ ತೋಕೂರು ಸಾಮಾಜಿಕ ಜಾಲತಾಣ ನಿಯೋಜಕರಾಗಿ ವಿಜಿತ್ ಕಾಟಿಪಳ್ಳ, ದೀಕ್ಷಿತ್ ತೋಕೂರು, ಗೌರವ ಸಲಹೆಗಾರಾಗಿ ಭಾಸ್ಕರ ಶೆಟ್ಟಿ
ವಸಂತ್ ಹೊಸಬೆಟ್ಟು ನಿತೇಶ್ ಸನಿಲ್ ಶಶಿಧರ್ ಕೋಡಿಕೆರೆ ಪ್ರಮೋದ್ ಶೆಟ್ಟಿ ತೋಕೂರು
ಸಂಘಟನಾ ಕಾರ್ಯದರ್ಶಿಯಾಗಿ ರಮಾನಾಥ್ ಕೋಡಿಕೆರೆ ಕಾನೂನು ಸಲಹೆಗಾರರಾಗಿ ಮಿಥೇಶ್ ಪೂಜಾರಿ ಸುರೇಶ್ ಸಂಕಲಕರಿಯ ಇವರುಗಳಿಗೆ ಜವಾಬ್ದಾರಿಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಜಿತೇಶ್ ತೋಕೂರು ನೆರವೇರಿಸಿದರು.