Tuesday, May 13, 2025
Homeರಾಜ್ಯನೀರಿನ ಸಮಸ್ಯೆ: ಗ್ರಾಮ ಪಂಚಾಯತಿ ಕಚೇರಿಗೆ ಬೇಲಿ ಹಾಕಿ ಪ್ರತಿಭಟಿಸಿದ ಮಹಿಳೆಯರು

ನೀರಿನ ಸಮಸ್ಯೆ: ಗ್ರಾಮ ಪಂಚಾಯತಿ ಕಚೇರಿಗೆ ಬೇಲಿ ಹಾಕಿ ಪ್ರತಿಭಟಿಸಿದ ಮಹಿಳೆಯರು

ಮಸ್ಕಿ: ಕುಡಿಯುವ ನೀರಿಗಾಗಿ ಇಲ್ಲಿನ ಪಾಮನಕಲ್ಲೂರು ಗ್ರಾಮ ಪಂಚಾಯತಿ ಕಚೇರಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗಿದೆ. ನೀರು ಸರಬರಾಜಿಗೆ ಆಗ್ರಹಿಸಿ ಗ್ರಾಮಸ್ಥರು ಪಂಚಾಯತಿ ಕಚೇರಿಗೆ ಬೇಲಿ ಹಾಕಿ ಶನಿವಾರ ಪ್ರತಿಭಟಿಸಿದ್ದಾರೆ. ಪಾಮನಕಲ್ಲೂರು, ಚಿಲ್ಕರಾಗಿ, ಆನಂದಗಲ್ ಸೇರಿ ಹಲವು ಗ್ರಾಮಗಳಿಗೆ ಕಳೆದ ಕೆಲವು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಕಳೆದ ಐದಾರು ದಿನಗಳಿಂದ ಪಂಚಾಯತಿ ವತಿಯಿಂದ ನೀರು ಸರಬರಾಜು ಆಗದಿರುವುದಕ್ಕೆ ಆಕ್ರೋಶಿತರಾದ ನೂರಾರು ಮಹಿಳೆಯರು ಪಂಚಾಯತಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆದಿದ್ದರೂ ಯಾವ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಲಿಲ್ಲ. ಪಂಚಾಯತ್ ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿದರು.

RELATED ARTICLES
- Advertisment -
Google search engine

Most Popular