ವಯನಾಡ್: ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ಇಲ್ಲಿವರೆಗೆ 282 ಶವಗಳು ಪತ್ತೆಯಾಗಿದ್ದು, ಇನ್ನೂ ಶವಗಳು ಸಿಗುತ್ತಲೇ ಇವೆ. ಇಂದು ಕಾರ್ಯಾಚರಣೆ ಮುಂದುವರೆದಿದ್ದು, ಇನ್ನಷ್ಟು ಶವಗಳು ಸಿಗುವ ಸಾಧ್ಯತೆಯಿದೆ.
ಈ ಗುಡ್ಡ ಕುಸಿತದ ಭೀಕರತೆ ಎಷ್ಟಿತ್ತೆಂದರೆ, 80 ಕಿ.ಮೀ. ದೂರದ ವರೆಗೆ ಶವಗಳು ಕೊಚ್ಚಿಕೊಂಡು ಹೋಗಿವೆ. ಸೂಜಿಪಾರ್ ಅರಣ್ಯದ ಮೂಲಕ ನೆಲಂಬೂರಿ ನದಿಯಲ್ಲಿ ಕೊಚ್ಚಿಹೋಗಿದ್ದ ಶವಗಳು ಪತ್ತೆಯಾಗಿದ್ದು, 21 ಆಂಬುಲೆನ್ಸ್‌ನಲ್ಲಿ 41 ಶವಗಳನ್ನು ಮೆಪ್ಪಾಡಿಗೆ ರವಾನೆ ಮಾಡಲಾಗಿದೆ.
ಈ ಆಂಬುಲೆನ್ಸ್‌ಗಳು ಸಾಲಾಗಿ ಸಾಗುವ ದೃಶ್ಯವುಳ್ಳ ವಿಡಿಯೊವೊಂದು ವೈರಲ್ ಆಗಿದೆ. ಅರ್ಧ ಕಿ.ಮೀ. ಉದ್ದದ ಸಾಲಿನಲ್ಲಿ ಆಂಬುಲೆನ್ಸ್‌ಗಳು ಸಾಗುತ್ತಿರುವುದನ್ನು ನೋಡಿದರೆ ಎಂತಹವರ ಕಣ್ಣಲ್ಲೂ ಕಣ್ಣೀರು ಬರದಿರಲಾರದು. ನಿಜಕ್ಕೂ ಇಂತಹ ಸನ್ನಿವೇಶ ಯಾರಿಗೂ ಬರುವುದು ಬೇಡವೆಂಬ ಪ್ರಾರ್ಥನೆ ಮನದಲ್ಲೇ ಮೂಡುವುದು ಖಚಿತ.
ವೀಡಿಯೋ ವೀಕ್ಷಿಸಲು ಇಲ್ಲಿನ ಲಿಂಕ್ ಕ್ಲಿಕ್ ಮಾಡಿ…