ದಾವಣಗೆರೆ : ದಾವಣಗೆರೆಯ ಆಧ್ಯಾತ್ಮ ಪರಂಪರೆಯ ಶ್ರೀ ಗಾಯತ್ರಿ ಪರಿವಾರದಿಂದ ಶ್ರೀ ಬುದ್ಧ ಪೂರ್ಣಿಮೆಯ ಪ್ರಯುಕ್ತ ಪ್ರತೀ ತಿಂಗಳು ಹುಣ್ಣಿಮೆಯೆಂದು ನಡೆಯುವ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ ಉಪಾಸನೆ ನಿನ್ನೆ ದಿನ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದಲ್ಲಿ ಸುಸಂಪನ್ನ ಗೊಂಡಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ ಮತ್ತು ಕುಟುಂಬದವರ ಈ ತಿಂಗಳ ಪೂಜಾ ಸೇವೆಯ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ರಮೇಶ್ ಪಟೇಲ್, ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಸಂಚಾಲಕರಾದ
ಭಾವನ್ನಾರಾಯಣ, ಸಮಿತಿ ಸದಸ್ಯರಾದ ವಿಯಕುಮಾರ್ ಶೆಟ್ಟಿ, ಸುರೇಶ್, ಚನ್ನಬಸಪ್ಪ, ವಿಕ್ರಂ ಜೈನ್,
ವಿ.ಕೃಷ್ಣ ಮೂರ್ತಿ, ವೀರಭದ್ರಪ್ಪ ದಂಪತಿಯರು, ಗೀತಾ ಸಂತೋಷ್, ಸತ್ಯನಾರಾ ಯಣಮೂರ್ತಿ, ಸತೀಶ್ ಆರ್.ಎಂ. ಮುಂತಾದವರು ಉಪಸ್ಥಿತರಿದ್ದರು.