ಕಾಸರಗೋಡು : ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ “ಬೇಕಲ ರಾಮನಾಯಕ ಸ್ಮರಣಾಂಜಲಿ – ಕವಿಗೋಷ್ಠಿ ಕಾರ್ಯಕ್ರಮದಲ್ಲಿ, ಸಂಧ್ಯಾರಾಣಿ ಟೀಚರ್ ನೇತೃತ್ವದ ನುಳ್ಳಿಪ್ಪಾಡಿಯ ಕನ್ನಡ ಭವನ ಪ್ರಕಾಶನದಿಂದ ಪ್ರಕಟಗೊಂಡ “ಮೌನ ಮಾತಾದಾಗ “ಕವನ ಸಂಕಲನವು ಎ.27ರಂದು ಅಪರಾಹ್ನ 2ಗಂಟೆಗೆ ಬಿಡುಗಡೆ ಗೊಳ್ಳಲಿದೆ. ಕಾಸರಗೋಡು ಬೀರಂತಬೈಲ್ ನ ಮೇಘಾ ಶಿವರಾಜ್ ಬರೆದ ಈ ಕವನ ಸಂಕಲನವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷರಾದ ಡಾ. ಜೆ. ರವೀಂದ್ರ ಮಂಗಳೂರು ಇವರು ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಸೇವಾ ಸಂಘ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅವರಿಗೆ ನೀಡಿ ಬಿಡುಗಡೆಗೊಳಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್, ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ಗೌರವಾಧ್ಯಕ್ಷ ಪ್ರದೀಪ್ ಬೇಕಲ್, ಕಾರ್ಯದರ್ಶಿ ವಸಂತ್ ಕೆರೆಮನೆ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ, ಸತೀಶ್ ಕೂಡ್ಲು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ವಲಯ ಸಂಘಟನಾ ಕಾರ್ಯದರ್ಶಿ ರೇಖಾ ರೋಷನ್, ಉಷಾ ಟೀಚರ್ ಕೋಟೆಕಣಿ, ಶಿವರಾಜ್ ಮೊದಲಾದವರು ಭಾಗವಹಿಸುವರು ಎಂದು ಕಾಸರಗೋಡು ಕನ್ನಡ ಭವನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.