ಉಜಿರೆ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಬೆಳ್ತಂಗಡಿ ತಾಲೂಕು ವೇದಿಕೆ ವತಿಯಿಂದ ಚಿತ್ರ ಮಾತಾಡಿದಾಗ ವಿಶೇಷ ಕಾರ್ಯಕ್ರಮ ಜ. 26 ರಂದು ನಡೆಯಿತು.
ಉಜಿರೆ ಗ್ರಾಮ ಪಂಚಾಯತು ಸಭಾ ಭವನದಲ್ಲಿ ನಡೆದ ಶಾಲಾ ಕಾಲೇಜು ಮಕ್ಕಳ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಎಸ್.ಡಿ.ಎಂ ಡಿ.ಎಡ್ ಮತ್ತು ಬಿ.ಎಡ್ ಕಾಲೇಜು ಪ್ರಾಧ್ಯಾಪಕರಾದ ಮಂಜು.ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕು ಆಮಂತ್ರಣ ವೇದಿಕೆ ಅಧ್ಯಕ್ಷರಾದ ವಿದ್ಯಾಶ್ರೀ ಅಡೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಆಮಂತ್ರಣ ವೇದಿಕೆ ರಾಜ್ಯ ಸದಸ್ಯರಾದ ಆಶಾ ಅಡೂರು, ಜಿಲ್ಲಾಧ್ಯಕ್ಷರಾದ ಸಂಧ್ಯಾ.ಎಸ್.ರೈ ಕಡೇಶಿವಾಲಯ, ನಿರ್ದೇಶಕರಾದ ಚೇತನ್ ಅಮೈ, ಬಂಟ್ವಾಳ ತಾಲೂಕು ಅಧ್ಯಕ್ಷರಾದ ರಶ್ಮಿತಾ ಸುರೇಶ್ ಜೋಗಿಬೆಟ್ಟು , ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಆಮಂತ್ರಣ ವೇದಿಕೆ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀದೇವಿ ಸಚಿನ್ ಮುಂಡ್ರುಪ್ಪಾಡಿ, ಶಿಕ್ಷಕಿ ಸರೀನ್ ತಾಜ್ ಕಾಶೀಪಟ್ಣ, ವನಜಾ ಜೋಶಿ, ರೇಣುಕಾ ಸುಧೀರ್ ಅರಸಿನಮಕ್ಕಿ
ಭಾಗವಹಿಸಿದ್ದರು.
ನಿನಾದ ಕ್ಲಾಸಿಕಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ವಿಜಯ ಕುಮಾರ್ ಜೈನ್ ಆಮಂತ್ರಣ ಪ್ರಸ್ತಾವಿಸಿದರು.
ಆಮಂತ್ರಣ ತಾಲೂಕು ವೇದಿಕೆ ಕಾರ್ಯದರ್ಶಿ ಅಶ್ವಿಜ ಶ್ರೀಧರ್ ನಿರೂಪಿಸಿದರು.