ಮಂಗಳೂರು: ಚರ್ಚ್ ಧರ್ಮಗುರುವೊಬ್ಬರು ಹಾಡಹಗಲೇ ವೃದ್ಧ ದಂಪತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ನಡೆದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಲ ಚರ್ಚ್ ನ ಧರ್ಮಗುರು ಫಾದರ್ ನೆಲ್ಸನ್ ಓಲಿವೆರಾ ಹಲ್ಲೆ ನಡೆಸಿದ ಪಾದ್ರಿ ಎಂದು ತಿಳಿದುಬಂದಿದೆ. ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ.
ಪಾದ್ರಿ ಆ ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೃದ್ಧ ದಂಪತಿ ಮತ್ತು ಪಾದ್ರಿ ಮಧ್ಯೆ ಯಾವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಹಲ್ಲೆ ಬಗ್ಗೆ ಸಂತ್ರಸ್ತ ದಂಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.