Wednesday, July 24, 2024
HomeUncategorizedಪೆಟ್ರೋಲ್ ಬೆಲೆ 100 ರ ಗಡಿ ದಾಟಿಸಿದ್ದು ಯಾರು?: ಎ.ಎಸ್.ಪೊನ್ನಣ್ಣ

ಪೆಟ್ರೋಲ್ ಬೆಲೆ 100 ರ ಗಡಿ ದಾಟಿಸಿದ್ದು ಯಾರು?: ಎ.ಎಸ್.ಪೊನ್ನಣ್ಣ

ಪೆಟ್ರೋಲ್ ಬೆಲೆಯನ್ನು ಲೀಟರಿಗೆ 100 ರ ಗಡಿ ದಾಟಿಸಿದ ಶತಕ ವೀರರು ಯಾರು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಬಿಜೆಪಿ ಯವರನ್ನು ತೀಕ್ಷವಾಗಿ ಪ್ರಶ್ನಿಸಿದ್ದಾರೆ.

ಇಂದು ಭಾಗಮಂಡಲ ಮೇಲ್ಸೆತುವೆ ಹಾಗೂ ತ್ರಿವೇಣಿ ಸಂಗಮದ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದ ಸಂಧರ್ಭದಲ್ಲಿ ಮಾಧ್ಯಮದವರು ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿದ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿದ್ದ ಬಗ್ಗೆ ಪ್ರತಿಕ್ರಿಯೆ ಬಯಸಿದಾಗ ಬಿಜೆಪಿ ಯವರ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿದರು.

ಲೀಟರಿಗೆ 100 ಇದ್ದ ಪೆಟ್ರೋಲ್ ಬೆಲೆಯನ್ನು 103 ಕ್ಕೆ ರಾಜ್ಯ ಸರ್ಕಾರ ಏರಿಸಿದೆ‌. ಇದಕ್ಕೆ ಪ್ರತಿಭಟನೆ ನಡೆಸುವ ಬಿಜೆಪಿ ಲೀಟರಿಗೆ 65 ಇದ್ದ ಪೆಟ್ರೋಲ್ ಬೆಲೆ 100 ಕ್ಕೆ ಬಿಜೆಪಿ ಸರ್ಕಾರ ಏರಿಸಿದಾಗ ಯಾಕೆ ಪ್ರತಿಭಟಿಸಲಿಲ್ಲ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು. ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಮಧ್ಯಪ್ರದೇಶ, ಎನ್.ಡಿ.ಎ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕರ್ನಾಟಕ ರಾಜ್ಯಕ್ಕಿಂತ ಹೆಚ್ಚು ಅಂದರೆ 107 ರೂ ಇದೆ.

ಇದನ್ನು ಅವರು ಪ್ರಶ್ನೆ ಮಾಡಲು ಸಾಧ್ಯವೇ ಎಂದು ಕುಟುಕಿದರು. ಬಿಜೆಪಿ ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ್ದರು. ಪೆಟ್ರೋಲ್ ವಿಚಾರದಲ್ಲಿ ಪ್ರತಿಭಟನೆ ಮಾಡಿದ್ದರು,ಡಾಲರ್ ವಿಚಾರದಲ್ಲಿ ಪ್ರತಿಭಟನೆ ಮಾಡಿದರು. ನಂತರ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಲ್ಲಿ ಯಾಕೆ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಹೇಳಿದ ಪೊನ್ನಣ್ಣ ನವರು ಬಿಜೆಪಿ ಗರು ಮೊದಲು ದ್ವಂದ ನಿಲುವನ್ನು ಬಿಡಲಿ ಎಂದು ಸಲಹೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular