ಆಗ್ರಾ: ಐದು ರೂಪಾಯಿಯ ಕುರ್ಕುರೆಯ ಕಾರಣಕ್ಕಾಗಿ ಇಲ್ಲೊಂದು ದಂಪತಿಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಕುರ್ಕುರೆ ತರಲಿಲ್ಲವೆಂದು ಪತಿಯ ಜೊತೆ ಇರಲು ಸಾಧ್ಯವಿಲ್ಲವೆನ್ನುವ ಕಾರಣ ನೀಡಿ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ.
ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ದಂಪತಿ ನಡುವೆ ಬೇರೇನೂ ಸಮಸ್ಯೆ ಇರಲಿಲ್ಲ. ಪತ್ನಿಗೆ ಹುರಿದ ತಿಂಡಿ, ಕುರ್ಕುರೆ ತಿನ್ನುವುದು ಇಷ್ಟ. ಮೊದಮೊದಲು ಪತ್ನಿಗೆ ಪತಿ ಕುರ್ಕುರೆ ಕೇಳಿದಂತೆ ತಂದುಕೊಡುತ್ತಿದ್ದ. ಆದರೆ ನಂತರದ ದಿನಗಳಲ್ಲಿ ಕೆಲಸದ ಒತ್ತಡದಿಂದ ಕುರ್ಕುರೆ ತರಲು ಮರೆಯುತ್ತಿದ್ದ. ಹೀಗಾಗಿ ಒಂದು ದಿನ ಈ ವಿಷಯವಾಗಿ ಗಲಾಟೆ ನಡೆದು ಪತ್ನಿ ತವರು ಮನೆಗೆ ತೆರಳಿದ್ದಳು. ಎರಡು ತಿಂಗಳ ಬಳಿಕ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪತಿ-ಪತ್ನಿಗೆ ಕೌನ್ಸೆಲಿಂಗ್ ನಡೆಸಲಾಗಿದೆ. ಪತಿಯಲ್ಲಿ ಕುರ್ಕುರೆ ತರಲು ಹೇಳಿದ್ದೆ. ಆದರೆ ಕುರ್ಕುರೆ ತರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ನಿ ಆಪಾದಿಸಿದ್ದಾಳೆ.