Wednesday, April 23, 2025
Homeರಾಷ್ಟ್ರೀಯಮದುವೆಯಾಗಿ ಕೇವಲ 15 ದಿನಕ್ಕೆ ಗಂಡನ ಕೊಲೆಗೆ ಸುಪಾರಿ ಕೊಟ್ಟ ಹೆಂಡತಿ

ಮದುವೆಯಾಗಿ ಕೇವಲ 15 ದಿನಕ್ಕೆ ಗಂಡನ ಕೊಲೆಗೆ ಸುಪಾರಿ ಕೊಟ್ಟ ಹೆಂಡತಿ

ಉತ್ತರ ಪ್ರದೇಶ : ಇತ್ತೀಚೆಗೆ ಮೀರತ್​ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆಯನ್ನೇ ಹೋಲುವ ಮತ್ತೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾಗಿ 15ದಿನಗಳಲ್ಲೇ ಪತ್ನಿ ತನ್ನ ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. 2 ಲಕ್ಷ ರೂ.ಗೆ ಸುಪಾರಿ ಕೊಟ್ಟು ಗಂಡನನ್ನು ಹತ್ಯೆ ಮಾಡಿಸಿದ್ದಾಳೆ. ಮಹಿಳೆ, ಆಕೆಯ ಪ್ರಿಯಕರ ಮತ್ತು ಕೊಲೆಗಾರನನ್ನು ಬಂಧಿಸಲಾಗಿದೆ.

ಸಹಾರ್ ಪೊಲೀಸ್ ಠಾಣೆಯ ಅಧಿಕಾರಿ ಪಂಕಜ್ ಮಿಶ್ರಾ ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 19 ರಂದು ಹೊಲವೊಂದರಲ್ಲಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದರು. ಅವರನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.

ಮದುವೆಯ ನಂತರವೂ, ಪ್ರಗತಿ ತನ್ನ ಗ್ರಾಮದ ಅನುರಾಗ್ ಅಲಿಯಾಸ್ ಬಬ್ಲು ಅಲಿಯಾಸ್ ಮನೋಜ್ ಯಾದವ್ ಜೊತೆ ಪ್ರೀತಿ ಉಳಿಸಿಕೊಂಡಿದ್ದಳು. ಇದು ದಿಲೀಪ್ ಹಾಗೂ ಪ್ರಗತಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಏಕೆಂದರೆ ಅವರ ಇಚ್ಛೆಗೆ ವಿರುದ್ಧವಾಗಿ ನಡೆದ ಮದುವೆಯಲ್ಲಿ ಅವರು ಅತೃಪ್ತರಾಗಿದ್ದರು. ಅವರು ದಿಲೀಪ್ ಅವರನ್ನು ವಿವಾಹವಾಗಿದ್ದರೂ, ಆಕೆಯ ಹೃದಯದಲ್ಲಿ ಅನುರಾಗ್ ಮಾತ್ರ ಇದ್ದ.

ದಿಲೀಪ್ ಶ್ರೀಮಂತನಾಗಿದ್ದು ಅವನನ್ನು ಹತ್ಯೆ ಮಾಡಿದರೆ ಆ ಆಸ್ತಿಯಲ್ಲಿ ತಾನು ಮತ್ತು ಅನುರಾಗ್ ಒಳ್ಳೆಯ ಜೀವನ ಸಾಗಿಸಬಹುದು ಎಂದು ಕನಸು ಕಂಡಿದ್ದಳು. ರಾಮ್​ ಚೌಧರಿ ಎಂಬಾತನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಬಳಿಕ ರಾಮ್​ ಜಿ ದಿಲೀಪ್​ನನ್ನು ಹೊಲಕ್ಕೆ ಕರೆದೊಯ್ದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ. ಆದರೆ ದಿಲೀಪ್ ಇನ್ನೂ ಸತ್ತಿರಲಿಲ್ಲ.

ವ್ಯಕ್ತಿಯನ್ನು ದಿಲೀಪ್ ಯಾದವ್ ಎಂದು ಗುರುತಿಸಲಾಗಿದೆ. ಅವರನ್ನು ಸೈಫೈ ಆಸ್ಪತ್ರೆ ಬಳಿಕ ಮಧ್ಯಪ್ರದೇಶ ಗ್ವಾಲಿಯರ್​ಗೆ ನಂತರ ಆಗ್ರಾಕ್ಕೆ ಸ್ಥಳಾಂತರಿಸಲಾಯಿತು. ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮಾರ್ಚ್ 20 ರಂದು ಔರೈಯಾದ ಆಸ್ಪತ್ರೆಗೆ ದಾಖಲಿಸಿತು. ಆದರೆ, ಮಾರ್ಚ್ 21 ರ ರಾತ್ರಿ ಅವರು ಸಾವನ್ನಪ್ಪಿದ್ದಾರೆ. ದಿಲೀಪ್ ಮಾರ್ಚ್ 5, 2025 ರಂದು ಪ್ರಗತಿ ಅವರನ್ನು ವಿವಾಹವಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಜೀತ್ ಆರ್ ಶಂಕರ್ ತಿಳಿಸಿದ್ದಾರೆ.

ಪೊಲೀಸರು ಮೊದಲು ರಾಮ್​ಜಿನನ್ನು ಬಂಧಿಸಿದ್ದರು, ಆತನ ಬಳಿಯಿಂದ ಎರಡು ಜೀವಂತ ಕಾರ್ಟ್ರಿಡ್ಜ್​ಗಳ ಜತೆಗೆ ಒಂದು ಪಿಸ್ತೂಲ್​ನ್ನು ವಶಪಡಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular