ಬೆಂಗಳೂರು: ಮದ್ಯಪ್ರಿಯರಿಗೊಂದು ಸಿಹಿ ಸುದ್ದಿಯಿದೆ. ನೆರೆ ರಾಜ್ಯಗಳ ಮದ್ಯ ಮಾರಾಟ ದರ ಪರಿಗಣಿಸಿ, ರಾಜ್ಯದಲ್ಲೂ ದುಬಾರಿ ಮದ್ಯದ ದರವನ್ನು ಅಗ್ಗಗೊಳಿಸಲು ಸರ್ಕಾರ ಚಿಂತಿಸಿದೆ ಎಂದು ವರದಿಯೊಂದು ತಿಳಿಸಿದೆ. ಅಬಕಾರಿ ಅದಾಯ ಹೆಚ್ಚಿಸಲು ಮದ್ಯದ ದರ ಇಳಿಸಲು ರಾಜ್ಯ ಸರ್ಕಾರ ಚಿಂತಿಸಿದ್ದು, ಇದರಿಂದ ಶೀಘ್ರದಲ್ಲೇ ಮದ್ಯ ದರ ಇಳಿಕೆಯಾಗಲಿದೆ.
ಪಕ್ಕದ ರಾಜ್ಯಗಳಲ್ಲಿ ಮದ್ಯ ದರ ಕಡಿಮೆಯಿರುವುದರಿಂದ ಗಡಿ ಭಾಗದ ಜನರು ಪಕ್ಕದ ರಾಜ್ಯಗಳಿಗೆ ಹೋಗಿ ಅಲ್ಲಿಂದ ಮದ್ಯ ಖರೀದಿಸಿ ತರುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟಿ ಕೋಟಿ ರೂ. ನಷ್ಟವಾಗಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲೂ ಬೆಲೆ ಇಳಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.
16 ಸ್ಲ್ಯಾಬ್‌ಗಳ ದರ ಇಳಿಕೆಗೆ ಅಬಕಾರಿ ಇಲಾಖೆ ಚಿಂತಿಸಿದ್ದು, ಸೆ.1ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಕಡಿಮೆ ಬೆಲೆಗೆ ಸಿಗಲಿದೆ. ಬ್ರಾಂಡ್ ಮದ್ಯದ ಪರಿಷ್ಕೃತ ದರ ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಂಭವವಿದೆ.