ಪ್ಯಾರಿಸ್: ಯಾವುದೇ ಕೆಲಸ ಕೊಡದೆ 20 ವರ್ಷಗಳ ಕಾಲ ತನಗೆ ಸಂಬಳ ಮಾತ್ರ ಕರೆಕ್ಟಾಗಿ ಕೊಡುತ್ತಿದ್ದ ಕಂಪೆನಿಯ ವಿರುದ್ಧವೇ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಫ್ರಾನ್ಸ್‌ನಲ್ಲಿ ಈ ವಿಚಿತ್ರ ಸನ್ನಿವೇಶದ ಬಗ್ಗೆ ವರದಿಯಾಗಿದೆ.
ಲಾರೆನ್ಸ್ ವ್ಯಾನ್ ವಾಸ್ಸೆನ್‌ಹೋವ್ ಆರೆಂಜ್ ಟೆಲಿಕಾಂ ಸಂಸ್ಥೆಯಲ್ಲಿ 1993ಕ್ಕೆ ಕೆಲಸಕ್ಕೆ ಸೇರಿದ್ದರು. ಪಾರ್ಶ್ವವಾಯು ಮೂರ್ಛೆ ರೋಗದಿಂದ ಬಳಲುತ್ತಿದ್ದ ಅವರು 2002ರಲ್ಲಿ ವರ್ಗಾವಣೆ ಕೋರಿದ್ದರು, ಮೂರ್ಛೆ ರೋಗದಿಂದ ಬಳಲುತ್ತಿದ್ದ ಲಾರೆನ್ಸ್ 2002ರಲ್ಲಿ ವರ್ಗಾವಣೆಗೆ ಕೋರಿದ್ದರು. ಕಂಪನಿ ವರ್ಗಾವಣೆ ಮಾಡಿದ್ದರೂ ಅವರಿಗೆ ಯಾವುದೇ ನಿರ್ದಿಷ್ಟ ಕೆಲಸ ಕೊಟ್ಟಿರಲಿಲ್ಲ.
20 ವರ್ಷಗಳಿಂದ ಕೆಲಸ ಮಾಡದಿದ್ದರೂ ವೇತನ ಮಾತ್ರ ಕಂಪನಿ ನಿರಂತರ ಆಕೆಗೆ ನೀಡುತ್ತಿತ್ತು. ಇದರಿಂದ ಬೇಸರಗೊಂಡಿರುವ ಅವರು ಕಂಪನಿ ವಿರುದ್ಧ ತಮ್ಮ ಬೇಸರ ಹೊರಹಾಕಿದ್ದಾರೆ. ಈ ಪರಿಸ್ಥಿತಿಯಿಂದ ನಾನು ಒಂಟಿತನ ಹಾಗೂ ನೈತಿಕ ಶೋಷಣೆ ಅನುಭವಿಸಿದ್ದೇನೆ. ನನ್ನ ವೃತ್ತಿ ಬದುಕಿಗೆ ಧಕ್ಕೆಯಾಗಿದೆ ಎಂದು ಲಾರೆನ್ಸ್ ದೂರಿದ್ದಾರೆ.
ಆದರೆ ಲಾರೆನ್ಸ್ ವೈದ್ಯಕೀಯ ಪರಿಗಣಿಸಿ, ಅನುಕೂಲ ವಾತಾವರಣದಲ್ಲಿ ಕೆಲಸ ಮಾಡಲು ತಿಳಿಸಿದ್ದೆವು. ಅವರ ನಿರಂತರ ಅನಾರೋಗ್ಯ ರಜೆಯಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಆರೆಂಜ್ ಕಂಪನಿ ಈ ಬಗ್ಗೆ ಪ್ರತಿಕ್ರಿಯಿಸಿದೆ.
20 ವರ್ಷದಿಂದ ಯಾವುದೇ ಕೆಲಸ ಕೊಡದೆ ಸಂಬಳ ಮಾತ್ರ ಕರೆಕ್ಟಾಗಿ ಕೊಡುತ್ತಿದ್ದ ಕಂಪನಿ ವಿರುದ್ಧ ಮಹಿಳೆ ದೂರು
RELATED ARTICLES