ಪಾಟ್ನಾ: ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವಕನ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿದ ಘಟನೆ ವರದಿಯಾಗಿದೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
30 ವರ್ಷದ ಯುವಕ 26 ವರ್ಷದ ಯುವತಿಯನ್ನು ಎರಡು ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದನೆನ್ನಲಾಗಿದೆ. ಆದರೆ ಮದುವೆಯಾಗಲು ಹೇಳಿದಾಗ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿ ಯುವಕನ ಮರ್ಮಾಂಗ ಕತ್ತರಿಸಿದ್ದುದಾಗಿ ಯುವತಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಆರೋಪಿ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಜು. 1ರಂದು ಛಾಪ್ರಾದ ನ್ಯಾಯಾಲಯದಲ್ಲಿ ವಿವಾಹ ನೋಂದಣಿಗೆ ಇವರಿಬ್ಬರು ನಿರ್ಧರಿಸಿದ್ದರು. ಆದರೆ ಯುವಕ ಅಂದು ತಪ್ಪಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಕ್ರೋಶಿತಳಾದ ಯುವತಿ ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.