Saturday, September 14, 2024
Homeನಿಧನಅಪಾರ್ಟ್‌ಮೆಂಟ್ ಮಹಡಿಯಿಂದ ಬಿದ್ದು ಮಹಿಳೆ ಸಾವು

ಅಪಾರ್ಟ್‌ಮೆಂಟ್ ಮಹಡಿಯಿಂದ ಬಿದ್ದು ಮಹಿಳೆ ಸಾವು

ಕುಂದಾಪುರ : ಅಪಾರ್ಟಮೆಂಟ್ ಒಂದರ ಐದನೇ ಮಹಡಿಯಿಂದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ.

ಮೃತರನ್ನು ಲಕ್ಷ್ಮೀ ಪ್ರತಾಪ್‌ ನಾಯಕ್(41)‌ ಎಂದು ಗುರುತಿಸಲಾಗಿದೆ.

ಆದಿತ್ಯವಾರ ಸಂಜೆ ವೇಳೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ಫ್ಲೋರಿಗೆ ಬಿದ್ದರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular