Sunday, July 14, 2024
Homeರಾಷ್ಟ್ರೀಯಪತಿ ಎದುರಲ್ಲೇ ಯುವತಿಯ ಕಿಡ್ನಾಪ್‌ ಮಾಡಿ, ಹತ್ಯೆಗೈದು, ಶವ ಸುಟ್ಟು ಹಾಕಿದ ಕುಟುಂಬಸ್ಥರು

ಪತಿ ಎದುರಲ್ಲೇ ಯುವತಿಯ ಕಿಡ್ನಾಪ್‌ ಮಾಡಿ, ಹತ್ಯೆಗೈದು, ಶವ ಸುಟ್ಟು ಹಾಕಿದ ಕುಟುಂಬಸ್ಥರು

ಚಂಡೀಗಢ: ತಮ್ಮ ವಿರೋಧದ ನಡುವೆಯೂ ತಾನು ಪ್ರೀತಿಸಿದ ವ್ಯಕ್ತಿಯ ಜೊತೆ ತನ್ನಿಷ್ಟದಂತೆ ಮದುವೆಯಾಗಿ, ದೂರದೂರಲ್ಲಿ ತಲೆ ಮರೆಸಿಕೊಂಡು ಬದುಕುತ್ತಿದ್ದ ಮಗಳನ್ನು ಪತ್ತೆಹಚ್ಚಿ, ಆಕೆಯ ಗಂಡನ ಎದುರಲ್ಲೇ ಆಕೆಯನ್ನು ಅಪಹರಿಸಿ ಕೊಲೆಗೈದ ಘಟನೆ ನಡೆದಿದೆ. ಅಲ್ಲದೆ ಸಾಕ್ಷ್ಯ ಸಿಗದಂತೆ ಯುವತಿಯ ಶವವನ್ನು ಸುಟ್ಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಜಸ್ಥಾನದ ಝಲವರ್​​​ನಲ್ಲಿ ಈ ಘಟನೆ ನಡೆದಿದೆ.
24 ವರ್ಷದ ಯುವತಿಯನ್ನು ಆಕೆ ಪತಿಯ ಎದುರಲ್ಲೇ ಕುಟುಂಬಸ್ಥರು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಮೃತದೇಹವನ್ನು ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.
ಹತ್ಯೆಯಾದ ಮಹಿಳೆ ರವಿ ಭೀಲ್ ಎನ್ನುವವರನ್ನು ಪ್ರೀತಿಸುತ್ತಿದ್ದಳು. ಅದಕ್ಕೆ ಕುಟುಂಬಸ್ಥರ ವಿರೋಧವಿತ್ತು. ಆದರೆ ಕುಟುಂಬಸ್ಥರ ವಿರೋಧದ ನುಡುವೆಯೂ ಆಕೆ ರವಿಯನ್ನು ಮದುವೆ ಆಗಿದ್ದಳು. ಮದುವೆಯಾದ ಬಳಿಕ ಹೆತ್ತವರಿಂದ ದೂರ ಆಗಿ, ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂಬುದನ್ನು ತಿಳಿದುಕೊಂಡ ಕುಟುಂಬಸ್ಥರು, ಆಕೆಯನ್ನು ಅಪಹರಿಸಿ ಈ ದುಷ್ಕೃತ್ಯ ನಡೆಸಿದ್ದಾರೆ. ಮಹಿಳೆಯ ಪತಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular