Saturday, December 14, 2024
Homeಉಡುಪಿಉಡುಪಿ | ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಮಹಿಳಾ ಸಿಬ್ಬಂದಿ

ಉಡುಪಿ | ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ ಮಹಿಳಾ ಸಿಬ್ಬಂದಿ

ಉಡುಪಿ: ಚಲಿಸುತ್ತಿರುವಾಗಲೇ ಓಡಿ ಹೋಗಿ ರೈಲು ಹತ್ತಲು ಯತ್ನಿಸಿದ ಮಹಿಳೆಯೊಬ್ಬರು ಆಯತಪ್ಪಿ ರೈಲಿನಡಿ ಬೀಳುತ್ತಲಿದ್ದ ವೇಳೆ ಮಹಿಳಾ ಸಿಬ್ಬಂದಿಯೊಬ್ಬರು ಅವರನ್ನು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಉಡುಪಿ ರೈಲು ನಿಲ್ದಾಣದಲ್ಲಿ ನಡೆದಿದೆ. ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರು ಮಾಡ್ಗಾಂವ್ ಪ್ಯಾಸೆಂಜರ್ ರೈಲು ನಿಲ್ದಾಣಕ್ಕೆ ಬಂದು ನಿಲ್ಲುವ ಮೊದಲೇ, ಚಲಿಸುತ್ತಿದ್ದ ರೈಲನ್ನು ಓಡಿಹೊಗಿ ಹತ್ತಲು ಮಹಿಳೆ ಯತ್ನಿಸಿದ್ದಾರೆ. ಈ ವೇಳೆ, ಅವರು ಆಯತಪ್ಪಿ ಬಿದ್ದಿದ್ದಾರೆ. ಆಕೆ ಬೀಳುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಆರ್​ಪಿಎಫ್​​​ ಸಿಬ್ಬಂದಿ ಅರ್ಪಣಾ ಜೀವದ ಹಂಗು ತೊರೆದು ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಆರ್​ಪಿಎಫ್​​​ ಸಿಬ್ಬಂದಿ ಅರ್ಪಣಾ ಸಾಹಸಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿಯಿಂದ ಹಾಗೂ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular