Sunday, March 23, 2025
Homeರಾಷ್ಟ್ರೀಯಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿರುವಾಗ ಚಲಿಸುತ್ತಿರುವ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟ ಮಹಿಳೆ | ವಿಡಿಯೋ ವೈರಲ್

ಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿರುವಾಗ ಚಲಿಸುತ್ತಿರುವ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟ ಮಹಿಳೆ | ವಿಡಿಯೋ ವೈರಲ್

ಚೆನ್ನೈ: ಬಸ್ಸಿನಲ್ಲಿ ಪ್ರಯಾಣಿಸುವಾಗ ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಇಲ್ಲೊಬ್ಬರು ಮಹಿಳೆ ಬಸ್ಸಿನಲ್ಲಿ ಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿದ್ದಾಗ ಬಸ್ಸಿನಿಂದ ಹೊರಗೆಸೆಯಲ್ಪಟ್ಟ ಆಘಾತಕಾರಿ ಘಟನೆ ವರದಿಯಾಗಿದೆ. ಬಸ್ಸು ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ನೋಡನೋಡುತ್ತಿದ್ದಂತೆ ಮಹಿಳೆ ಬಸ್ಸಿನಿಂದ ಹೊರಗೆ ಎಸೆಯಲ್ಪಡುತ್ತಾರೆ. ಅದೃಷ್ಟವಶಾತ್‌ ಪ್ರಾಣಾಪಾಯವಾಗಿಲ್ಲ. ಬಸ್ಸಿನ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆ ಹಿಡಿಯಲ್ಪಟ್ಟಿದ್ದು, ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
ತಮಿಳುನಾಡಿನಲ್ಲಿ ನಾಮಕ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಶಾರದಾ ಎಂದು ಗುರುತಿಸಲಾಗಿದ್ದು, ಬಟ್ಟೆ ಖರೀದಿಸಲೆಂದು ಹೋಗಿ ಹಿಂದಿರುಗುವಾಗ ಈ ದುರಂತ ಸಂಭವಿಸಿದೆ. ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಸೀಟು ಸಿಗದೆ ನಿಂತುಕೊಂಡು ಇವರು ಪ್ರಯಾಣಿಸುತ್ತಿದ್ದರು. ಬಸ್ಸಿನಿಂದ ಮಹಿಳೆ ಹೊರಬೀಳುತ್ತಿದ್ದಂತೆ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಆಘಾತಕಾರಿ ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ… ಇನ್ನು ಮುಂದೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಎಚ್ಚರದಿಂದಿರಿ…

GOWRISANKAR B on X: “ராசிபுரம் அருகே ஓடும் பஸ்ஸிலிருந்து தூக்கி வீசப்படும் பெண்ணின் பதபதைக்க வைக்கும் காட்சிகள்.#Rasipuram #namakkalnews #Namakkal #CCTVFootage #viralreels #accident #cctv #viral https://t.co/uhzEQDrNya” / X

RELATED ARTICLES
- Advertisment -
Google search engine

Most Popular