Saturday, April 19, 2025
Homeಮಂಗಳೂರುಮಂಗಳೂರು ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ

ಮಂಗಳೂರು ನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್
ವತಿಯಿಂದ ಅಧ್ಯಕ್ಷರಾದ ರೂಪಾ ಚೇತನ್ ರವರ ನೇತೃತ್ವದಲ್ಲಿ ವರುಷದ ಮಹಿಳಾ ಸಾಧಕಿಯರಾಗಿ, ವೃತ್ತಿಯಲ್ಲಿ ಖ್ಯಾತ ಪ್ರಸೂತಿ ತಜ್ಞೆ ಮತ್ತು ಸ್ತ್ರೀ ಸೌಂದರ್ಯ ತಜ್ಞ ರಾಗಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ಮೀನುಗಾರಿಕಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಾ ಆಳ ಸಮುದ್ರ ಮೀನುಗಾರಿಕೆಯಂತಹ ಸಾಹಸಮಯ ವೃತ್ತಿಯನ್ನು ಕೈ ಗೊಂಡು ಯಶಸ್ವಿ ಸಾಧಿಸಿದ ಕುಮಾರಿ ಪ್ರಾಪ್ತಿ ಜಯಪ್ರಕಾಶ್, ವೃತ್ತಿಯಲ್ಲಿ ಬ್ಯೂಟಿಶಿಯನ್ ಆದರೂ ಪ್ರವೃತ್ತಿಯಲ್ಲಿ ಕಲಾವಿದೆಯಾಗಿ, ಸಮಾಜ ಸೇವಕಿಯಾಗಿರುವ ಪ್ರತಿಭಾ ಸಾಲ್ಯಾನ್,ಹಾಗೂ NSUI ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಅಯೋರಾ ಟೆಲ್ಲಿಸ್,ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ವೆಲ್ವಿನ್ ಜೇಸನ್ ಉಪಾಧ್ಯಕ್ಷರಾದ ಪೃಥ್ವಿ ಸಾಲಿಯಾನ್ , ಕ್ಲೈಡ್ ಡಿ ಸೋಜಾ ಹಾಗೂ ಶಾನ್ ಡಿಸೋಜಾ , ಕಾರ್ಯದರ್ಶಿ ಅಭಿಷೇಕ್ ಮುಂತಾದವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೋಜಾ,ಮಾಜಿ ಶಾಸಕರಾದ ಜೆ.ಆರ್.ಲೋಬೊ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮ‌ಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ, ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕಂಬಳಿ,ಸದಸ್ಯರಾದ ಆಲಿಸ್ಟನ್ ಡಿ ಕುನ್ಹಾ,ಸ್ಟ್ಯಾನ್ಲಿ ಪಿಂಟೋ, ಕೆಪಿಎಂಸಿ ಪ್ರಧಾನ ಕಾರ್ಯದರ್ಶಿಗಳಾದ ಸ್ವರೂಪ ಎನ್ ಶೆಟ್ಟಿ, ಚಂದ್ರಕಲಾ ಡಿ ರಾವ್, ಗೀತಾ ಅತ್ತಾವರ್, ನಮಿತಾ ಡಿ ರಾವ್, ಶಕುಂತಲಾ ಕಾಮತ್, ಶಾಂತಲಾ ಗಟ್ಟಿ, ವಸಂತಿ ಅಂಚನ್,ಕಿರಣ ಜೇಮ್ಸ್, ವೀಣಾ ಬೆನೆಡಿಕ್ಟ್, ಪ್ರಿಯಾ ಅಂದ್ರಾದೆ ,ಮೇರಿ ಪಿಂಟೋ, ವಿಲ್ಮಾ ಡಿ ಕೋಸ್ಟಾ, ಮೀನಾ ಟೆಲ್ಲಿಸ್, ಮೇರಿ ಸಾಂತೀಸ್, ಕುಸುಮ ಬಂಗೇರಾ, ವಸಂತಿ, ರಮಣಿ ಉಮೇಶ್, ಮಲ್ಲಿಕಾ, ಅವಿಟಾ, ವಿಕ್ಟೋರಿಯಾ,ಬೆನೆಡಿಕ್ಟಾ, ಪ್ರೀತಿ ಕರ್ಕೇರಾ,ಚಂದ್ರಾವತಿ, ಪದ್ಮಾವತಿ, ವಿಶಾಲ, ಸುಮತಿ, ಲೂಸಿ, ವಿನಯಾ, ಬಬಿತಾ,ಉಷಾ ಕಿರಣ್ ಶೆಟ್ಟಿ, ಸಬೀತಾ,ಪ್ರೆಸಿಲ್ಲಾ, ಮರಿಯಾ,ಲತಾ, ಸುಜಾತಾ, ಡೋರಾ, ಸಿಂಥಿಯಾ, ಮಮತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ರೂಪಾ ಚೇತನ್ ಅತಿಥಿಗಳನ್ನು ಸ್ವಾಗತಿಸಿದರು. ಶಾಂತಲಾ ಗಟ್ಟಿ ನಿರೂಪಿಸಿದರು.ಪ್ರಿಯಾ ಅಂದ್ರಾದೆ ಧನ್ಯವಾದವನ್ನಿತ್ತರು.

RELATED ARTICLES
- Advertisment -
Google search engine

Most Popular