Sunday, July 14, 2024
Homeಮಂಗಳೂರುಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು: ಡಾ|| ಚೂಂತಾರು

ಮಾನಸಿಕವಾಗಿ ಮಹಿಳೆಯರೇ ಬಲಿಷ್ಠರು: ಡಾ|| ಚೂಂತಾರು

ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು. ಗಂಡನ ಯಶಸ್ಸಿಗೆ ಹೆಂಡತಿ ಅನಿವಾರ್ಯ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀಅಗತ್ಯ. ಹೀಗೆ ಒಬ್ಬ ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಪುರುಷರ ಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆ ದೈಹಿಕವಾಗಿ ಪುರುಷರಿಗಿಂತ ಬಲಾಡ್ಯವಲ್ಲದಿದ್ದರೂ, ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾರೆ. ಒಂದು ಪರಿಪೂರ್ಣ ಮನೆ, ಕುಟುಂಬ, ಸಮಾಜ, ನಾಡು ಮತ್ತು ದೇಶ ಕಟ್ಟಬೇಕಾದಲ್ಲಿ ಮಹಿಳೆ ಅನಿವಾರ್ಯಳು. ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಗೃಹರಕ್ಷಕಿಯಾಗಿ ಕೆಲಸ ಮಾಡಿ ಸಮಾಜದ ಸ್ವಾಸ್ಥಕಾಪಾಡುವ ಮಹಿಳಾ ಗೃಹರಕ್ಷಕಿಯರ ಕೊಡುಗೆ ಅತೀಅಮೂಲ್ಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ನುಡಿದರು.

ನಗರದ ಪೋಲಿಸ್ ಪೆರೇಡ್ ಅಂಗಳದಲ್ಲಿ ಮಾ.8 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಗೃಹ ರಕ್ಷಕಿಯರಾದ ಪ್ರೇಮಾ ಮೆಟಲ್ ಸಂಖ್ಯೆ 885 ಪಣಂಬೂರು ಘಟಕ ,ಜಯಂತಿ ಮೆಟಲ್ ಸಂಖ್ಯೆ 145, ಸುರತ್ಕಲ್ ಘಟಕ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಮಂಗಳೂರು  ಘಟಕದ  ಘಟಕಾಧಿಕಾರಿಯಾದ ಮಾರ್ಕ್ ಶೆರಾ, ಉಳ್ಳಾಲ ಘಟಕದ ಘಟಕಾಧಿಕಾರಿ ಸುನಿಲ್, ಗ್ರಹರಕ್ಷಕರಾದ ದಿವಾಕರ್,ಸಂಜಯ್, ಆಶಾ, ಆಶಾಲತಾ ಹಾಗೂ ಇತರ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular