ಹಾಸನದ ಸತ್ಯಮಂಗಲ ಅರಳಿಕಟ್ಟೆ ರೋಡ್ನಲ್ಲಿ ಇರುವ ಗೀತಾ ಶ್ರೀ ಫ್ಯಾಷನ್ ಸ್ಟುಡಿಯೋ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ)ಕರ್ನಾಟಕ ದ ವತಿಯಿಂದ ಆಚರಿಸಲಾಯಿತು.
ಟ್ರಸ್ಟ್ ನ ವತಿಯಿಂದ ಸಂಸ್ಥಾಪಕ ಅಧ್ಯಕ್ಷರು ಆದ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಗೀತಾ ಶ್ರೀ ಫ್ಯಾಷನ್ ಸ್ಟುಡಿಯೋದ ಮಾಲೀಕರದಂತಹ ಗೀತಾ ರವರನ್ನು ಸನ್ಮಾನಿಸಿ ಗೌರವಿಸಿದರು .
ಹೆಣ್ಣು ಮನುಕುಲದ ಕಣ್ಣಾಗಿ ಜಗದಲ್ಲಿ ಶ್ರಮಿಸುತ್ತ ಜೀವನದಲ್ಲಿ ಸಾತ್ವಿಕ ಹಠ, ಛಲದಲ್ಲಿ ಬೆಳೆಯುತ್ತಿದ್ದಾರೆ. ಎಂಬುದನ್ನು ಅರಿತು ಕೊಳ್ಳಬೇಕಿದೆ. ಪ್ರಸ್ತುತ ಉದಾರಣೆ ಎಂದರೆ ಟೈಲರಿಂಗ್ ತರಬೇತಿಯನ್ನು ಹಲವಾರು ಹೆಣ್ಣುಮಕ್ಕಳಿಗೆ ನೀಡುತ್ತಾ ನೂರಾರು ಹೆಣ್ಣು ಮಕ್ಕಳು ತರಬೇತಿಗಳನ್ನು ಪೂರೈಸಿ ಹೋಗಿರುವ ಈ ಗೀತಾ ಫ್ಯಾಶನ್ ಸ್ಟುಡಿಯೋನಲ್ಲಿ ಗೀತಾ ರವರ ಶ್ರಮ ಕಾಣುತ್ತದೆ. ಟೈಲರಿಂಗ್ ಹಾಗೂ ಎಂಬ್ರೈಡರಿ ಹೇಳಿಕೊಡುತ್ತಾ ಹತ್ತು ವರ್ಷವನ್ನು ಪೂರೈಸಿರುವ ಇವರ ಶ್ರಮ ಬಹಳವಾಗಿದೆ.
ಹಾಗೆಯೇ 2025 ರಿಂದ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಸಾರಥ್ಯದೊಂದಿಗೆ ಗೀತಾ ಫ್ಯಾಶನ್ ಸ್ಟುಡಿಯೋ ವು ಮಹಿಳೆಯರಿಗೆ ಟೈಲರಿಂಗ್ ಹಾಗೂ ಎಂಬ್ರಾಯ್ಡರಿ ತರಬೇತಿಗಳನ್ನು ನೀಡಿ ಯಶಸ್ವಿಯಾಗಿದ್ದು ಮುಂದೆಯೂ ಹೀಗೆ ಕಾರ್ಯನಿರ್ವಹಿಸಿಕೊಂಡು ಹೋಗಲೆಂದು ಆಶಿಸುತ್ತ ಗೀತಾರವರನ್ನು ಟ್ರಸ್ಟ್ ನ ವತಿಯಿಂದ ಗೌರವಿಸಿ ಸನ್ಮಾನಿಸಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಹೆಚ್. ಎಸ್. ಪ್ರತಿಮಾ ಹಾಸನ್ ಹೇಳಿದರು .
ನಂತರ ಮಹಿಳೆಯರು ಆರ್ಥಿಕವಾಗಿ ಎಷ್ಟೇ ಪ್ರಬಲರಾಗಿದ್ದರು ಸಹ ತನ್ನ ಆರ್ಥಿಕ ಅಸ್ತಿತ್ವವನ್ನು ತನ್ನ ದುಡಿಮೆಯಿಂದಲೇ ಪ್ರಬಲಗೊಳಿಸಬೇಕೆಂದು, ಗೀತಾ ರವರು ಹೀಗೆ ಕಾರ್ಯಗಳನ್ನು ಮಹಿಳೆಯರಿಗೆ ಹೆಚ್ಚೆಚ್ಚು ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಿ ತರಬೇತಿಗಳನ್ನು ನೀಡಲೆಂದು ಆಶಿಸುತ್ತೇನೆ ಎಂದು ಮಾನಸ ವಕೀಲರು ತಿಳಿಸಿದರು.
ನಂತರ ಮಾತನಾಡುತ್ತಾ ನನ್ನನ್ನು ಗುರುತಿಸಿ ಸನ್ಮಾನಿಸಿದ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಸನ್ಮಾನಿತರದ ಗೀತಾ ರವರು ತಿಳಿಸಿದರು. ತರಬೇತಿ ಪಡೆದ ಕೆಲವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತ ರುಕ್ಮಿಣಿ,ಹೇಮಾ, ಇನ್ನು ಹಲವರು ಉಪತರಿದ್ದರು .

