Saturday, July 20, 2024
Homeಮಂಗಳೂರುಮಳವೂರು | ಮೊಮ್ಮಗುವನ್ನು ಆಡಿಸುತ್ತಿದ್ದ ಮಹಿಳೆ ಟೆರೇಸ್‌ನಿಂದ ಕೆಳಗೆ ಬಿದ್ದು ಸಾವು

ಮಳವೂರು | ಮೊಮ್ಮಗುವನ್ನು ಆಡಿಸುತ್ತಿದ್ದ ಮಹಿಳೆ ಟೆರೇಸ್‌ನಿಂದ ಕೆಳಗೆ ಬಿದ್ದು ಸಾವು

ಮಂಗಳೂರು: ಮೊಮ್ಮಗುವನ್ನು ಆಡಿಸುತ್ತಿದ್ದ ಮಹಿಳೆಯೊಬ್ಬರು ಟೆರೇಸ್‌ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಳವೂರಿನ ಕಲ್ಲೋಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರಾಯಚೂರು ಜಿಲ್ಲೆಯ ಬಸಮ್ಮ (53) ಎಂದು ಗುರುತಿಸಲಾಗಿದೆ.
ಮಗ ಕನಕ ರೆಡ್ಡಿ-ಸೊಸೆ ಹಾಗೂ ಮೊಮ್ಮಗುವಿನ ಜೊತೆ ಅವರು ಮಳವೂರಿನ ಡಯಾನ ಅವರ ಬೆಥೆಲ್‌ ಹೌಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಮೂರು ವರ್ಷಗಳಿಂದ ಇದೇ ಮನೆಯಲ್ಲಿ ಅವರಿದ್ದರು.
ಟೆರೇಸ್‌ನಲ್ಲಿ ಮಗುವನ್ನು ಆಡಿಸುತ್ತಿದ್ದ ಬಸಮ್ಮ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡಿದ್ದ ಅವರನ್ನು ಬಜಪೆಯ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular