Monday, January 20, 2025
HomeUncategorizedಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು: ಶಾಸಕ ಉಮಾನಾಥ್ ಕೋಟ್ಯಾನ್

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು: ಶಾಸಕ ಉಮಾನಾಥ್ ಕೋಟ್ಯಾನ್

ಮೂಡುಬಿದಿರೆ: ಟೈಲರಿಂಗ್ ಉದ್ಯಮಕ್ಕೆ ಸಾಕಷ್ಟು ಬೇಡಿಕೆಯಿದ್ದು ಮಹಿಳೆಯರು ತರಬೇತಿಯನ್ನು ಪಡೆದು ಸ್ವ ಉದ್ಯೋಗದತ್ತ ಗಮನ ಹರಿಸುವ ಮೂಲಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಮೂಲ್ಕಿ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಸಲಹೆ ನೀಡಿದ್ದಾರೆ.

ಮಂಗಳವಾರ ತಾಲೂಕು ಆಡಳಿತ ಸೌಧದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮಹಿಳೆಯರಿಗೆ ನೀಡಲಾಗುವ ಉಚಿತ ಹೊಲಿಗೆ ಯಂತ್ರವನ್ನು ತಾಲೂಕಿನ ೩೬ ಅರ್ಹ ಮಹಿಳಾ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಟೈಲರಿಂಗ್ ಒಳ್ಳೆಯ ಉದ್ಯಮವಾಗಿದೆ. ಹಾಗಾಗಿ ಟೈಲರಿಂಗ್‌ನಲ್ಲಿ ತರಬೇತಿಯನ್ನು ಪಡೆದು ಸ್ವ ಉದ್ಯಮ ಆರಂಭಿಸಿ ಎಂದರು.

ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಂಜುನಾಥ್ ಹಾಗೂ ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular