Monday, July 15, 2024
Homeರಾಜಕೀಯದೇವೇಗೌಡರ ಸಭೆಗೆ ನುಗ್ಗಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು

ದೇವೇಗೌಡರ ಸಭೆಗೆ ನುಗ್ಗಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ ಮಹಿಳೆಯರು

ತುಮಕೂರು: ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಭೆಗೆ ನುಗ್ಗಿದ ಇಬ್ಬರು ಮಹಿಳೆಯರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ದೇವೇಗೌಡರ ಪುತ್ರ, ಜೆಡಿಎಸ್ ಮುಖಂಡ ಕುಮಾರಸ್ವಾಮಿ ವಿರುದ್ಧ ಮಹಿಳೆಯರು ಘೋಷಣೆ ಕೂಗಿದರು. ಘಟನೆಯಿಂದ ತಬ್ಬಿಬ್ಬಾದ ದೇವೇಗೌಡರು ಕೆಲವು ನಿಮಿಷ ಭಾಷಣ ನಿಲ್ಲಿಸಿದರು. ಬಳಿಕ ಭಾಷಣ ಮುಂದುವರಿಸಿದರು. ಬಳಿಕ ಪೊಲೀಸರು ಘೋಷಣೆ ಕೂಗಿದ ಮಹಿಳೆಯರನ್ನು ಬದಿಗೆ ಕರೆದೊಯ್ದರು.

RELATED ARTICLES
- Advertisment -
Google search engine

Most Popular