Monday, December 2, 2024
Homeಮೂಡುಬಿದಿರೆಧರ್ಮಜಾಗೃತಿ ಸಮಿತಿಯ ವತಿಯಿಂದ ಮಹಿಳಾ ಸ್ವಾಸ್ಥ್ಯ ಮಾಹಿತಿ ಕಾರ್ಯಕ್ರಮ

ಧರ್ಮಜಾಗೃತಿ ಸಮಿತಿಯ ವತಿಯಿಂದ ಮಹಿಳಾ ಸ್ವಾಸ್ಥ್ಯ ಮಾಹಿತಿ ಕಾರ್ಯಕ್ರಮ

ಮೂಡುಬಿದಿರೆ : ಧರ್ಮ ಜಾಗೃತಿ ಸಮಿತಿಯ ವತಿಯಿಂದ ನವಂಬರ್ 12ರಂದು ಪ್ರಭಾತ್ ಸಿಲ್ಕ್ಸ್ ಮೂಡುಬಿದಿರೆಯಲ್ಲಿ ಮಹಿಳಾ ಸ್ವಾಸ್ಥ್ಯದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ರತ್ನಾ ಉಮೆನ್ಸ್ ಕ್ಲಿನಿಕ್ ನ ಡಾll ರಮೇಶ್ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಮಾತನಾಡುತ್ತಾ, “ಹೆಣ್ಣು ಸಂಸಾರದ ಕಣ್ಣು” ಆದ್ದರಿಂದ ಸ್ತ್ರೀಯರು ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯನ್ನು ಮನಮುಟ್ಟುವಂತೆ ತಿಳಿಸಿದರು. ಸುಮಾರು ನೂರು ಜನ ಮಹಿಳಾ ಕಾರ್ಮಿಕರು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.

ಪ್ರಭಾತ್ ಸಿಲ್ಕ್ ನ ಪೂರ್ಣಚಂದ್ರ ಜೈನ್ ಇವರು ಶುಭಾಶಂಸನೆಗೈದರು. ಸೌ. ಅಲಕಾ ಬಲರಾಂ ಇವರು ಕಾರ್ಯಕ್ರಮ ನಿರೂಪಿಸಿದರು. ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular