ಮೂಡುಬಿದಿರೆ : ಧರ್ಮ ಜಾಗೃತಿ ಸಮಿತಿಯ ವತಿಯಿಂದ ನವಂಬರ್ 12ರಂದು ಪ್ರಭಾತ್ ಸಿಲ್ಕ್ಸ್ ಮೂಡುಬಿದಿರೆಯಲ್ಲಿ ಮಹಿಳಾ ಸ್ವಾಸ್ಥ್ಯದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ರತ್ನಾ ಉಮೆನ್ಸ್ ಕ್ಲಿನಿಕ್ ನ ಡಾll ರಮೇಶ್ ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರು ಮಾತನಾಡುತ್ತಾ, “ಹೆಣ್ಣು ಸಂಸಾರದ ಕಣ್ಣು” ಆದ್ದರಿಂದ ಸ್ತ್ರೀಯರು ಆರೋಗ್ಯದ ಕಾಳಜಿಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯನ್ನು ಮನಮುಟ್ಟುವಂತೆ ತಿಳಿಸಿದರು. ಸುಮಾರು ನೂರು ಜನ ಮಹಿಳಾ ಕಾರ್ಮಿಕರು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.
ಪ್ರಭಾತ್ ಸಿಲ್ಕ್ ನ ಶ್ರೀಯುತ ಪೂರ್ಣಚಂದ್ರ ಜೈನ್ ಇವರು ಶುಭಾಶಂಸನೆಗೈದರು. ಸೌ. ಅಲಕಾ ಬಲರಾಂ ಇವರು ಕಾರ್ಯಕ್ರಮ ನಿರೂಪಿಸಿದರು. ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.