“ವಿಶ್ವ ಕೊಂಕಣಿ ರಂಗ ಶ್ರೇಷ್ಟ” ಹಾಗೂ “ವಿಶ್ವ ಕೊಂಕಣಿ ಅನುವಾದ ಪುರಸ್ಕಾರ” -2026 ಅರ್ಜಿ ಆಹ್ವಾನ         

0
13

                                            

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2025-2026 ಸಾಲಿಗೆ “ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ 2026” ಹಾಗೂ  “ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2026”, ಈ ಎರಡೂ ಪ್ರಶಸ್ತಿ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಂಗಶ್ರೇಷ್ಟ ಪುರಸ್ಕಾರಕ್ಕಾಗಿ ಅರುವತ್ತು ವರ್ಷಕ್ಕಿಂತ ಹಿರಿಯ, ಕೊಂಕಣಿ ಮಾತೃಭಾಷಿಕ,  ರಂಗಭೂಮಿಯ ಏಳಿಗೆಗಾಗಿ ಸಿನೆಮಾ-ನಾಟಕಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆಯಂತಹಾ ಕ್ಷೇತ್ರಗಳಲ್ಲಿ ನಿರಂತರ ದುಡಿಮೆ ಹಾಗೂ ಸಮರ್ಪಣಾ ಭಾವದೊಂದಿಗೆ ಜೀವಮಾನದ ಸೇವೆ ನೀಡಿರುವ ರಂಗಕರ್ಮಿಗಳಿಂದ ನೇರವಾಗಿ ಅಥವಾ ಹಿತೈಷಿ ಕಲಾಸಕ್ತರಿಂದ ಪ್ರಸ್ತಾವನೆಗಳನ್ನು  ಆಹ್ವಾನಿಸಲಾಗಿದೆ.

ಅನುವಾದ ಪುರಸ್ಕಾರಕ್ಕಾಗಿ ಭಾಷಾಂತರ ಕ್ಷೇತ್ರದಲ್ಲಿ, ವಿಶೇಷವಾಗಿ ಇತರ ಭಾಷೆಗಳ ಕೃತಿಗಳನ್ನು ಕೊಂಕಣಿಗೆ ಅತ್ಯುತ್ತಮವಾಗಿ ಅನುವಾದಿಸಿ  ಧೀರ್ಘ ಅವಧಿಗೆ (ಒಂದೆರಡು ಪುಸ್ತಕಗಳ ಭಾಷಾಂತರಕ್ಕೆ ಸೀಮಿತವಾಗದೆ)  ಸೇವೆ ಸಲ್ಲಿಸಿರುವವರಿಂದ ನೇರವಾಗಿ ಅಥವಾ ಹಿತೈಷಿ ಸಾಹಿತ್ಯಾಸಕ್ತರಿಂದ   ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ಮೊದಲು www.vishwakonkani.org ನಲ್ಲಿ ತಮ್ಮ  ಹೆಸರು ನೊಂದಾಯಿಸಿಕೊಂಡು, ಅನಂತರ ವಿವರವಾದ ಪ್ರಸ್ತಾವನಾ ಅರ್ಜಿಯನ್ನು, ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು  575016 ಇಲ್ಲಿಗೆ 2026  ಜನವರಿ 05 ನೇ ತಾರೀಕಿನೊಳಗಾಗಿ ಅಂಚೆ ಮೂಲಕ ಕಳುಹಿಸಿಕೊಡುವುದು.  ಪ್ರಶಸ್ತಿ  ಪ್ರದಾನ ಸಮಾರಂಭವು 2026 ಜನವರಿ 31  ತಾರೀಕು ಜರುಗಲಿದೆ.   

LEAVE A REPLY

Please enter your comment!
Please enter your name here