Tuesday, June 18, 2024
Homeರಾಜ್ಯಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಎಲ್‌ ಪಿ ಜಿ ದಿನಾಚರಣೆ

ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಎಲ್‌ ಪಿ ಜಿ ದಿನಾಚರಣೆ

ಸುಸ್ಥಿರ ಭವಿಷ್ಯಕ್ಕಾಗಿ ಯುವ ಜನತೆಗೆ ಎಲ್‌ ಪಿ ಜಿ ಯಂತಹ ಶಕ್ತಿಯ ಮೂಲಗಳ ಸದ್ಬಳಕೆಯ ಅರಿವು ಅಗತ್ಯ ಎಂದು ಪ್ರೊ. ನಂದಕಿಶೋರ್‌ ಹೇಳಿದರು. ಇವರು ಎಂ. ಪಿ. ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪ್ರಿಯದರ್ಶಿನಿ ಗ್ಯಾಸ್‌ ಎಜನ್ಸಿಸ್‌ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಎಲ್‌. ಪಿ. ಜಿ. ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಎಲ್‌. ಪಿ. ಜಿ. ಸುರಕ್ಷತೆಯ ಬಗ್ಗೆ ಪ್ರಾತ್ಯಕ್ಷಿತೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಇಂಡಿಯನ್‌ ಗ್ಯಾಸ್ ವಲಯ ವ್ಯವಸ್ಥಾಪಕರಾದ ಗೀತ ಮೋಲ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಕಾಂ ವಿಭಾಗದ ಸಂಯೋಜಕ ಹಾಗೂ ವಾಣಿಜ್ಯ ಶಾಸ್ತ್ರ ಸಹ ಪ್ರಾದ್ಯಾಪಕ ಡಾ. ವಿದ್ಯಾಧರ ಹೆಗ್ಡೆ ಎಸ್‌ ವಹಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಸಹ ಪ್ರಾದ್ಯಾಪಕ ಡಾ. ಗಣೇಶ್‌ ಎಸ್‌ ಸ್ವಾಗತಿಸಿದರು. ರಾ. ಸೇ. ಯೋಜನಾಧಿಕಾರಿ ಪ್ರಸನ್ನ ಕುಮಾರ್‌ ವಂದಿಸಿದರು.‌ ಸೌಮ್ಯ ದಾತೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದಿವ್ಯ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular