ವಿಶ್ವ ವಿದ್ಯಾನಿಲಯ ಕಾಲೇಜು ಬನ್ನಡ್ಕ, ಮೂಡುಬಿದ್ರಿ
ಇಲ್ಲಿ ಯುವ ರೆಡ್ ಕ್ರಾಸ್ ವತಿಯಿಂದ ವಿಶ್ವ ಶಾಂತಿ ದಿನಾಚರಣೆ ಮತ್ತು ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಡಾ. ಪ್ರವೀಣ್ ಕೆ ಅಸೋಸಿಯೇಟ್ ಪ್ರೊಫೆಸರ್ ಶ್ರೀ ಮಹಾವೀರ ಕಾಲೇಜು ಮೂಡುಬಿದ್ರಿ ಇವರು ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ಕಾಲೇಜಿನ ಸಂಯೋಜಕರಾದ ಡಾ. ದಯಾನಂದ ನಾಯ್ಕ್, ಯುವ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿಯಾದ ಡಾ. ಅಶೋಕ್ ಮುರಾಳ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ಅಜಿತ್ ಕುಮಾರ್ ಡಿ’ಸೋಜ ಉಪಸ್ಥಿತರಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಡಾ. ಪ್ರವೀಣ್ ಕುಮಾರ್ ಕೆ ಇವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ರೆಡ್ ಕ್ರಾಸ್ ನ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮವನ್ನು ಕುಮಾರಿ ಫಾತಿಮ ಶಹರ್ ಬಾನು ನಿರೂಪಿಸಿದರು, ಕುಮಾರಿ ಜೊಲಿಟ ಡಿ’ಸೋಜ ಸ್ವಾಗತಿಸಿದರು, ಕುಮಾರಿ ಅಕ್ಷತಾ ನಾಯ್ಕ್ ಧನ್ಯವಾದ ತಿಳಿಸಿದರು.
ವಿಶ್ವ ಶಾಂತಿ ದಿನಾಚರಣೆ ಮತ್ತು ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆ
RELATED ARTICLES