ಚೇತನ ಫೌಂಡೇಶನ್ ಧಾರವಾಡ ಇದರ ಅಂಗ ಸಂಸ್ಥೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆಯ ಮಾಹಿತಿ ಸಂಗ್ರಹ ಸಂಸ್ಥೆಯು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ದಿನಾಂಕ :19.7.2024 ರಂದು 24 ನಿಮಿಷಗಳಲ್ಲಿ 224ಕವಿಗಳು ವಾಟ್ಸಪ್ಪ್ ಮೂಲಕ ಏಕ ಕಾಲಕ್ಕೆ ಆಶು ಕವಿತೆ ಬರೆದು ಸುಭಾಷ್ ಎಸ್ ಮತ್ತು ರಾಜು ಬೆಂಗಳೂರು ವಿಶ್ವ ದಾಖಲೆ ಮೆರೆದಿದ್ದಾರೆ.
ಸುಭಾಷ್ ರವರು ಹಲವಾರು ವರುಷಗಳಿಂದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರಾಗಿ ಸೇವೆ ಸಲ್ಲಿಸಿಕೊಂಡು ಬಂದಿರುತ್ತಾರೆ. ರಾಜು ಬೆಂಗಳೂರುರವರು ಪತ್ರಕರ್ತರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಕವನಗಳು ಕೆಲವೊಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಇವರು ಪತ್ರಿಕೋದ್ಯಮ ದೊಂದಿಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.