Monday, December 2, 2024
Homeಮಂಗಳೂರುವಿಶ್ವ ಟೇಕ್ವಾಂಡೋ: ಸಂಹಿತಾಗೆ ಎರಡು ಕಂಚಿನ ಪದಕ

ವಿಶ್ವ ಟೇಕ್ವಾಂಡೋ: ಸಂಹಿತಾಗೆ ಎರಡು ಕಂಚಿನ ಪದಕ

ಮಂಗಳೂರು: ಬ್ಯಾಂಕಾಕ್‌ನಲ್ಲಿ ನಡೆದ ಟೇಕ್ವಾಂಡೋ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಸಂಹಿತಾ ಅಲೆವೂರಾಯ ಕೆ.ವಿ. ಎರಡು ಕಂಚಿನ ಪದಕ ಗಳಿಸಿದ್ದಾರೆ.

ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಪೂಮ್ಸೆ ಮತ್ತು ಕ್ಯೂರೋಗಿ ವಿಭಾಗದಲ್ಲಿ ಪದಕ ಗಳಿಸಿದರು.

೨೦೨೧ರಲ್ಲಿ ನೇಪಾಳದಲ್ಲಿ ನಡೆದ ಜೂನಿಯರ್‌ ಚಾಂಪಿಯನ್‌ಶಿಪ್‌ ನಲ್ಲಿ ಚಿನ್ನದ ಪದಕ, ೨೦೨೨ರಂದು ಮಲೇಷ್ಯಾದಲ್ಲಿ ಬೆಳ್ಳಿ ಪದಕ, ೨೦೨೩ರಲ್ಲಿ ಮಲೇಷ್ಯಾದಲ್ಲಿ ಚಿನ್ನದ ಮತ್ತು ಕಂಚಿನ ಪದಕ ಗಳಿಸಿದ್ದರು.  

ಈ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ನಿಟ್ಟೆ ಎನ್‌ಎಂಎಎಐಟಿ ಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಸಂಹಿತಾ, ಕದ್ರಿಯ ವಾಸುದೇವ ಭಟ್‌ ಮತ್ತು ದೀಪಾ ಕೆ.ಎಸ್.‌ ದಂಪತಿ ಪುತ್ರಿ. ಗುರುರಾಜ್‌ ಇಟಗಿ ಮತ್ತು ನಿಖಿಲ್‌ ಶೆಟ್ಟಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ. 

RELATED ARTICLES
- Advertisment -
Google search engine

Most Popular