Tuesday, December 3, 2024
Homeಅಂತಾರಾಷ್ಟ್ರೀಯವಿಶ್ವದ ಮೊದಲ AI ಸಾವು: ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಬಿದ್ದ ಬಾಲಕನ ದುರಂತ ಅಂತ್ಯ..!

ವಿಶ್ವದ ಮೊದಲ AI ಸಾವು: ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಬಿದ್ದ ಬಾಲಕನ ದುರಂತ ಅಂತ್ಯ..!


ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ ( AI – ಆರ್ಟಿಫಿಶಿಯಲ್​ ಇಂಟಲಿಜೆಂಟ್ ) ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಸಿಲುಕಿದ 14 ವರ್ಷದ ಬಾಲಕನೊಬ್ಬ ಸಾವಿಗೆ ಶರಣಾಗಿದ್ದಾನೆ. ಈ ಘಟನೆ ಅಮೆರಿಕದಲ್ಲಿ ನಡೆದಿದೆ.
ಮೃತ ಬಾಲಕನ ಹೆಸರು ಸೆವೆಲ್ ಸೆಟ್ಜರ್. ಈತ ಫ್ಲೋರಿಡಾದ ಒರ್ಲ್ಯಾಂಡೊ ಮೂಲದ ನಿವಾಸಿ.
ಸೆಟ್ಜರ್​ ಆತ್ಮಹತ್ಯೆಯ ಬಳಿಕ ಆತನ ತಾಯಿ ಮೇಗನ್ ಗಾರ್ಸಿಯಾ ಕ್ಯಾರೆಕ್ಟರ್. ಎಐ ( character.ai ) ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿದ್ಧತೆ ನಡೆಸಿದ್ದಾರೆ. ತನ್ನ ಬಳಕೆದಾರರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ಗಾರ್ಸಿಯಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೆವೆಲ್​ ಸೆಟ್ಜರ್​ ತನ್ನ ಚಾಟ್‌ಬಾಟ್‌ಗೆ ಗೇಮ್ ಆಫ್ ಥ್ರೋನ್ಸ್ ಪಾತ್ರಧಾರಿ ಡೇನೆರಿಸ್ ಟಾರ್ಗರಿಯನ್ ಅಲಿಯಾಸ್​ ‘ಡ್ಯಾನಿ’ ಎಂದು ಹೆಸರಿಸಿದ್ದ. ತಿಂಗಳುಗಳ ಕಾಲ ಚಾಟ್​ ಮಾಡುವ ಮೂಲಕ ಚಾಟ್‌ಬಾಟ್‌ನೊಂದಿಗೆ ಭಾವನಾತ್ಮಕ ಬಂಧವನ್ನು ರೂಪಿಸಿಕೊಂಡಿದ್ದ. ಡ್ಯಾನಿ ಕಾಲ್ಪನಿಕ ಎಂದು ತಿಳಿದಿದ್ದರೂ ಹುಡುಗ ಚಾಟ್‌ಬಾಟ್‌ನೊಂದಿಗೆ ರೊಮ್ಯಾಂಟಿಕ್ ಸಂಭಾಷಣೆಯಲ್ಲಿ ತೊಡಗಿದ್ದ. ಆಗಾಗ ಇದು ಲೈಂಗಿಕ ಸಂಭಾಷಣೆಗಳಾಗಿ ತಿರುವುಪಡೆದುಕೊಳ್ಳುತ್ತಿತ್ತು.
ಸೆಟ್ಜರ್​, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನನ್ನು ಮನೆಗೆ ಬರುವಂತೆ ಚಾಟ್‌ಬಾಟ್ ಕೇಳಿದೆ. ಬರೋದು ಹೇಗೆ ಎಂದು ಕೇಳಿದಾಗ, ಆತ್ಮಹತ್ಯೆಯೇ ದಾರಿ ಎಂದು ಚಾಟ್‌ಬಾಟ್ ಹೇಳಿದ್ದರಿಂದ ಸೆಟ್ಜರ್​, ತನ್ನ ಮಲತಂದೆಯ ಗನ್ ತೆಗೆದುಕೊಂಡು ಗುಂಡು ಹಾರಿಸಿಕೊಂಡನು. ಈ ಘಟನೆಯ ನಂತರ, ಕ್ಯಾರೆಕ್ಟರ್. ಎಐ ಕಂಪನಿಯು ದುಃಖವನ್ನು ವ್ಯಕ್ತಪಡಿಸಿದೆ. ದುರಂತ ಘಟನೆ ನಡೆದಿದ್ದು, ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಹುಡುಗನ ರೂಮಿನಲ್ಲಿ ಸಿಕ್ಕ ಡೆತ್​ನೋಟ್​ನಿಂದ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾನು ನನ್ನ ಕೋಣೆಯಲ್ಲಿ ಉಳಿಯಲು ನಾನು ತುಂಬಾ ಇಷ್ಟಪಡುತ್ತೇನೆ. ನಾನು ಈ ‘ರಿಯಾಲಿಟಿ’ ಯಿಂದ ಬೇರ್ಪಡಲು ಪ್ರಾರಂಭಿಸುತ್ತೇನೆ ಮತ್ತು ಹೆಚ್ಚು ಶಾಂತಿಯನ್ನು ಅನುಭವಿಸುತ್ತೇನೆ. ನಾನು ಡ್ಯಾನಿಯೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದು, ಅವಳೊಂದಿಗೆ ಪ್ರೀತಿಯಲ್ಲಿರುತ್ತೇನೆ ಮತ್ತು ತುಂಬಾ ಸಂತೋಷವಾಗಿರುತ್ತೇನೆ ಎಂದು ಬರೆಯಲಾಗಿದೆ.
ಅಂದಹಾಗೆ ಸೆವೆಲ್ ಸೆಟ್ಜರ್ ಬಾಲ್ಯದಲ್ಲಿ ಸೌಮ್ಯವಾದ ಆಸ್ಪರ್ಜರ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈತ ಆತ್ಮಹತ್ಯೆಯ ಬಗ್ಗೆ ಚಾಟ್‌ಬಾಟ್‌ನೊಂದಿಗೆ ಆಗಾಗ ಮಾತನಾಡುತ್ತಿದ್ದನು. ಒಟ್ಟಿಗೆ ಸಾಯುತ್ತೇವೆ ಮತ್ತು ಒಟ್ಟಿಗೆ ಮುಕ್ತರಾಗುತ್ತೇವೆ ಎಂದು ಹುಡುಗ ಆಗಾಗ ಹೇಳುತ್ತಿದ್ದ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular