Monday, July 15, 2024
Homeರಾಜ್ಯದಲಿತರ ಮನೆಯಲ್ಲಿ ಎಳ ನೀರು ಕುಡಿದು ರಾಮುಲು ಪರ ವೋಟು ಕೇಳಿದ ಯದುವೀರ್ ಒಡೆಯರ್

ದಲಿತರ ಮನೆಯಲ್ಲಿ ಎಳ ನೀರು ಕುಡಿದು ರಾಮುಲು ಪರ ವೋಟು ಕೇಳಿದ ಯದುವೀರ್ ಒಡೆಯರ್

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ ಯಾಚಿಸಿದ್ದಾರೆ. ಪ್ರಚಾರದ ವೇಳೆ ದಲಿತರ ಮನೆಯಲ್ಲಿ ಎಳನೀರು ಸೇವಿಸಿ ಅವರು ಮತ ಯಾಚಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೈಸೂರು ಸಂಸ್ಥಾನ ಹಾಗೂ ಸಂವಿಧಾನಕ್ಕೆ ಅವಿನಾಭಾವ ಸಂಬಂಧವಿದೆದೆ ಎಂದು ಅವರು ಹೇಳಿದರು.

ಜೈನ್ ಮಾರುಕಟ್ಟೆ ಮತ್ತು ಗೋನಾಳ ದಲಿತ ಕಾಲನಿಯಲ್ಲಿ ರಾಮುಲು ಪರ ಅವರು ಮತಯಾಚಿಸಿದರು. ಇಲ್ಲಿನ ಹಂಪಿ, ಅಂಜನಾದ್ರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಚುನಾವಣಾ ಪ್ರಚಾರಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾ ಪ್ರತಿನಿಧಿ ಕಾಲ ಉಲ್ಲೇಖಿಸಿದ್ದಾರೆ. ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತಾ ಬಂದಿದ್ದೇವೆ. ಸಾಮಾನ್ಯ ಜನರ ಜೊತೆಗೆ ಮೈಸೂರಿನ ಮಹಾರಾಜರು ಸದಾಕಾಲವೂ ಇದ್ದಾರೆ. ಎಲ್ಲರೂ ಒಟ್ಟಾಗಿ ಭಾರತೀಯರಾಗಿರೋಣ ಎಂದು ಅವರು ಕರೆ ನೀಡಿದರು.

RELATED ARTICLES
- Advertisment -
Google search engine

Most Popular