ಕಿನ್ನಿಗೋಳಿ: ಶ್ರೀ ಶನೀಶ್ವರ ಭಕ್ತ ವೃಂದ ಪಕ್ಷಿಕೆರೆ ಈ ಬಾರಿಯ ಮುಂಬೈ ಯಕ್ಷ ಯಾನ ಜುಲೈ 12 ರಿಂದ 22 ರವರೆಗೆ ಮುಂಬೈ ಮಹಾನಗರ ಮತ್ತು ಹೊರವಲಯದಲ್ಲಿ ವಿವಿಧ ಕಡೆಗಳಲ್ಲಿ ವಿಜಯಕುಮಾರ್ ಶೆಟ್ಟಿ ಮೊಯಿಲೊಟ್ಟು ಇವರ ಸಂಚಾಲಕತ್ವದಲ್ಲಿ ನಡೆಯಲಿದೆ. ಈ ಬಾರಿ ಶನಿಶ್ವರ ಮಹಾತ್ಮೆ, ಶ್ರೀ ಸತ್ಯನಾರಾಯಣ ಮಹಾತ್ಮೆ, ಸ್ವಾಮಿ ಕೊರಗಜ್ಜ, ತುಳುನಾಡ ಬಲಿಯೇಂದ್ರೆ ಯಕ್ಷಗಾನ ತಾಳಮದ್ದಳೆಗಳು ಪ್ರಸ್ತುತಗೊಳ್ಳಲಿದೆ, ಹಿಮ್ಮೇಳದಲ್ಲಿ ಶ್ರೀನಿವಾಸ ಬಳಮಂಜ, ಡಾ ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಶೆಟ್ಟಿಗಾರ್, ರೋಹಿತ್ ಉಚ್ಚಿಲ ಇರಲಿದ್ದು, ಮುಮ್ಮೇಳದಲ್ಲಿ ಕದ್ರಿ ನವನೀತ ಶೆಟ್ಟಿ, ವಿಜಯಕುಮಾರ್ ಮೊಯಿಲೊಟ್ಟು, ರವಿ ಭಟ್ ಪಡುಬಿದ್ರೆ, ಸಂಜಯಕುಮಾರ್ ಗೋಣಿಬೀಡು, ಸದಾಶಿವ ಅಳ್ವ ತಲಪಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಪ್ರಸನ್ನ ಶೆಟ್ಟಿ ಅತ್ತೂರು ಇರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜುಲೈ 12 ರಿಂದ 22ರವರೆಗೆ ಯಕ್ಷ ಯಾನ ಆರಂಭ
RELATED ARTICLES