ತನ್ನ ಸ್ವರ ಮಾಧುರ್ಯ, ದಕ್ಷತೆ ಹಾಗೂ ಕಾರ್ಯಚಟುವಟಿಕೆಗಳ ಮೂಲಕ ಯಕ್ಷಧ್ರುವ ಎಂದೇ ಖ್ಯಾತನಾಮರಾದ ಪಟ್ಲ ಸತೀಶ್ ಶೆಟ್ಟಿ ಇವರ ನೇತ್ರತ್ವದಲ್ಲಿ ರಂಗಭೂಮಿ ಹಾಗೂ ಚಲನಚಿತ್ರದಲ್ಲಿ ಮಿಂಚಿದ ಮೇರುನಟ ದಿ| ಶಂಕರ್ ನಾಗ್ ಇವರ ಧರ್ಮಪತ್ನಿ ಅರುಂಧತಿ ನಾಗ್ ಅವರ ಪರಿಕಲ್ಪನೆಯ ರಂಗ ಶಂಕರ ಆಡಿಟೋರಿಯಂ ನಲ್ಲಿ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನ ಪ್ರಬುದ್ಧ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು. ಕಾರ್ಯಕ್ರಮ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿದ್ದಲ್ಲದೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಾರ್ಯಸಾಧನೆಗಳ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು. ಪಟ್ಲ ಸತೀಶ್ ಶೆಟ್ಟಿಯವರ ಆಪ್ತರಾದ ಗೋಪಿ ಭಟ್, ಹೇಮಂತ್ ರೈ ಮತ್ತು ಮಧುಶ್ರಿ ಜೊತೆಗಿದ್ದರು.