ಕಟೀಲು : ಯಕ್ಷಗಾನ ಒಂದಿಷ್ಟು ಹಾಳಾಗಿದೆ. ಭಾಗವತರು ಹಾಡುವ ಪದ್ಯಗಳಲ್ಲಿ ಪ್ರಸಂಗಗಳ ನಡೆಗಳಲ್ಲಿ ಸುಧಾರಣೆ ಆಗಬೇಕಾಗಿದೆ.
ಶೃಂಗಾರ ಕರುಣ ಗಳಿಗೆ ಮದ್ದಲೆಗಿಂತ ಚೆಂಡೆಯೇ ಹೆಚ್ಚು ಬಂದಿದೆ. ಚೆಂಡೆಯೇ ಸಾಕು ಎಂದು ಮದ್ದಲೆ ಇಲ್ಲದೆ ಯಕ್ಷಗಾನ ನಡೆದರೂ ನಡೆದೀತು. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರೂ ಪ್ರೇಕ್ಷಕರೂ ಬದಲಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಾಗಾರಗಳು ವಿಮರ್ಶೆಗಳು ಚಿಂತನೆಗಳು ನಡೆಯುತ್ತ ತಿದ್ದುಪಡಿ ಸರಿಪಡಿಸುವಿಕೆ ಆಗಬೇಕು ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಯಕ್ಷಗಾನ ಅಕಾಡಮಿ ದುರ್ಗಾ ಮಕ್ಕಳ ಮೇಳ ಹಾಗೂ ಕಟೀಲು ದೇವಸ್ಥಾನಗಳ ಸಹಯೋಗದಲ್ಲಿ ನಡೆದ ಯಕ್ಷಗಾನ ತಾಳಮದ್ದಲೆ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸನತ ಕುಮಾರ ಶೆಟ್ಟಿ, ಯಕ್ಷಲಹರಿಯ ರಘುನಾಥ ಕಾಮತ್. ಕಲಾವಿದೆ ಪೂರ್ಣಿಮಾ ಯತೀಶ್ ರೈ ಸುರತ್ಕಲ್, ಶಾಂತಾರಾಮ ಕುಡ್ವ ಮೂಡುಬಿದ್ರೆ ಮತ್ತಿತರರಿದ್ದರು.
ಪಶುಪತಿ ಶಾಸ್ತ್ರಿ ಸ್ವಾಗತಿಸಿದರು. ಪದ್ಮನಾಭ ಮರಾಠೆ ನಿರೂಪಿಸಿದರು. ಬಳಿಕ ಪ್ರಸಿದ್ದ ಕಲಾವಿದರಿಂದ ತಾಳಮದ್ದಲೆ ನಡೆಯಿತು.