ಯಕ್ಷಲಹರಿ (ರಿ.) ಯುಗಪುರುಷ ಕಿನ್ನಿಗೋಳಿ ಯಕ್ಷಲಹರಿಯ 34 ನೇ ವರ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ “ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ” ಕಾರ್ಯಕ್ರಮದ ಸಮಾರೋಪ ಸಮಾರಂಭ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ಲಕ್ಷೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.
ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ದೇವಪ್ರಸಾದ ಶೆಟ್ಟಿ ಬೆಳಪು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀ ಕ್ಷೇತ್ರ ಶಿಬರೂರಿನ ತಂತ್ರಿವರೇಣ್ಯರಾದ ವೇ.ಮೂ.ವೇದವ್ಯಾಸ ತಂತ್ರಿ ಶುಭಾಶಂಸನೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಮಾಜಿ ಸದಸ್ಯರಾದ ಡಾ.ಹರಿಕ್ರಷ್ಣ ಪುನರೂರು, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ನಮ್ಮ ಕುಡ್ಲ ವಾಹಿನಿಯ ಆಡಳಿತ ನಿರ್ದೇಶಕರಾದ ಲೀಲಾಕ್ಷ ಕರ್ಕೇರಾ,ಶುಂಠಿಲಪದವು ಗ್ರಾಮ ಪಂಚಾಯತ್ ನ ಪಿಡಿಓ ಉಗ್ಗಪ್ಪ ಮೂಲ್ಯ, ಧರ್ಮದರ್ಶಿ ಮೋಹನದಾಸ ಸುರತ್ಕಲ್, ಭುವನಾಭಿರಾಮ ಉಡುಪ, ಯಕ್ಷಲಹರಿಯ ಅಧ್ಯಕ್ಷರಾದ ರಘುನಾಥ ಕಾಮತ್ ಕೆಂಚನೆಕೆರೆ ಗೌರವ ಉಪಸ್ಥಿತರಿದ್ದರು.
ಕಿನ್ನಿಗೋಳಿ ಇನ್ನರ್ ಕ್ಲಬ್ ಅಧ್ಯಕ್ಷೆ ಸವಿತಾ ಸಂತೋಷ್ ಮುಖ್ಯ ಅಭ್ಯಾಗತರಾಗಿದ್ದರು.
ದಿವಂಗತ ಪಿ .ಸತೀಶ್ ರಾವ್, ಮಾಜಿ ಅಧ್ಯಕ್ಷರು, ಯಕ್ಷಲಹರಿ ಇವರ ಸಂಸ್ಮರಣೆಯನ್ನು ನಿವ್ರತ ಶಿಕ್ಷಕರಾದ ಸಾಯಿನಾಥ ಶೆಟ್ಟಿ ಮಾಡಿದರು.
ಅಗರಿ ಸಮೂಹ ಸಂಸ್ಥೆಗಳ ಮಾಲಕರಾದ ಅಗರಿ ರಾಘವೇಂದ್ರ ರಾವ್ ಇವರು ವಿದ್ಯಾರ್ಥಿ ವೇತನ ಪ್ರಧಾನ ಮಾಡಿದರು.
ರವಿ ಅಲೆವೂರಾಯ ವರ್ಕಾಡಿ ಹಾಗೂ ಬಾಲಕ್ರಷ್ಣ ದೇವಾಡಿಗ,ಪಂಜ ಇವರಿಗೆ ಶ್ರೀ ಧನಲಕ್ಷ್ಮಿ ಕ್ಯಾಶ್ಶು ಎಕ್ಸ್ಪೋರ್ಟ್, ಮೂಡಬಿದ್ರೆ ಇದರ ಅಧ್ಯಕ್ಷರಾದ ಕೆ.ಶ್ರೀಪತಿ ಭಟ್ ಕಲಾವಿದದ ನೆಲೆಯಲ್ಲಿ ಸನ್ಮಾನಿಸಲಾಯಿತು.
ಉದ್ಯಮಿ, ಜೋಕಿಮ್ ಕೊರೆಯ,ನಿಡ್ಡೋಡಿ, ಇವರಿಗೆ ಕಲಾಪೋಷಕ ಸಂನ್ಮಾನ ನೀಡಿ ಗೌರವಿಸಲಾಯಿತು.
ರಾಮಾವತಾರ ಹಾಗೂ ಕ್ರಷ್ಣವತಾರ ತಾಳಮದ್ದಳೆ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ರಘುನಾಥ ಕಾಮತ್ ಕೆಂಚನೆಕೆರೆ ಸ್ವಾಗತಿಸಿ, ವಸಂತ ದೇವಾಡಿಗ ಹಾಗೂ ಶ್ರೀವತ್ಸ ನಿರೂಪಿಸಿದರು.