spot_img
22.6 C
Udupi
Monday, January 30, 2023
spot_img
spot_img
spot_img

ಯಕ್ಷಾಂಗಣ ತಾಳಮದ್ದಳೆ ಸಪ್ತಾಹ – 2022  ಬಿಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ – ಸನ್ಮಾನ

ಮಂಗಳೂರು: ‘ಯಕ್ಷಗಾನದಲ್ಲಿ ಪ್ರೌಢ ಮಟ್ಟದ ಮಾತುಗಾರಿಕೆಯಿಂದ ಮೆರೆಯುವ ತಾಳಮದ್ದಳೆ ನಮ್ಮ ಭಾಗದ ಒಂದು ವಿಶಿಷ್ಟ ಕಲಾಪ್ರಕಾರ. ಅದನ್ನು ಹತ್ತು ವರ್ಷಗಳಿಂದ ಸಪ್ತಾಹ ರೂಪದಲ್ಲಿ ನಡೆಸುತ್ತಿರುವ ಯಕ್ಷಾಂಗಣದ ಕಾರ್ಯ ಶ್ಲಾಘನೀಯ’ ಎಂದು ಬೊಂಡಾಳ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಳ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು ವತಿಯಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ  ಕಲಾಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬದ ಮೂರನೇ ದಿನ ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು 

      ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮತ್ತು ಸಂಘಟಕ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ಸನ್ಮಾನ ನೆರವೇರಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ಆರ್, ಲಯನ್ಸ್ ಮಾಜಿ ರಾಜ್ಯಪಾಲ ದೇವದಾಸ ಭಂಡಾರಿ,ಸಂಸ್ಕಾರ ಭಾರತಿ ಮಂಗಳೂರು ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಮುಖ್ಯ ಅತಿಥಿಗಳಾಗಿದ್ದರು.

        ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಪ್ರಸ್ತಾವನೆಗೈದರು. ಶ್ಯಾಮಲಾ ಪದ್ಮನಾಭ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸಂಚಾಲಕ ರವೀಂದ್ರ ರೈ ಕಲ್ಲಿಮಾರು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಪ್ರಧಾನ ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ಸುಧಾಕರ ರಾವ್ ಪೇಜಾವರ, ಸಿದ್ಧಾರ್ಥ ಆಜ್ರಿ , ಪದ್ಮನಾಭ ಶೆಟ್ಟಿ ಬೆಟ್ಟಂಪಾಡಿ, ಡಾ.ಸೂರಜ್ ಶೆಟ್ಟಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.

 ‘ವೀರಾಂಜನೇಯ ವಿಜಯ’ ತಾಳಮದ್ದಳೆ:

‌.     ‘ಸಪ್ತ ವಿಜಯ’ ಸರಣಿಯಲ್ಲಿ ಹೆಬ್ರಿ ಗಣೇಶ ಕುಮಾರ್ ಭಾಗವತಿಕೆಯಲ್ಲಿ ‘ವೀರಾಂಜನೇಯ ವಿಜಯ’ ಯಕ್ಷಗಾನ ತಾಳಮದ್ದಳೆ ಜರಗಿತು.

Related Articles

Stay Connected

0FansLike
3,687FollowersFollow
0SubscribersSubscribe
- Advertisement -

Latest Articles