spot_img
30.6 C
Udupi
Monday, September 25, 2023
spot_img
spot_img
spot_img

ತೆರೆಗೆ ರೆಡಿಯಾಗಿರುವ ಯಾನ್ ಸೂಪರ್ ಸ್ಟಾರ್ ತುಳು ಸಿನಿಮಾ


ಮಂಗಳೂರು: ಆನಂದ ಫಿಲಂಸ್ ಮತ್ತು ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿ ಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ ಯಾನ್ ಸೂಪರ್ ಸ್ಟಾರ್ ತುಳು ಚಲನಚಿತ್ರದ ಚಿತ್ರೀಕರಣ, ಡಬ್ಬಿಂಗ್ ಕೆಲಸ ಕಾರ್ಯಗಳು ಸಂಪೂರ್ಣಗೊಂಡಿದ್ದು, ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ತೆರೆಕಾಣಲಿದೆ.

ಉಡುಪಿ ಸುತ್ತಮುತ್ತ ಒಂದೇ ಹಂತದಲ್ಲಿ 25 ದಿನಗಳ ಕಾಲ ಸಿನಿಮಾಕ್ಕೆ ಚಿತ್ರೀಕರಣ ನಡೆದಿತ್ತು. ಮುಖ್ಯವಾಗಿ ಇಲ್ಲಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಳರೊಂದಿಗೆ ತುಳು ನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಮಾನಸಿ ಸುಧೀರ್, ಅನ್ ಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಪ್ರಿಯಾ – ಹೆಗ್ಡೆ ತಾರಾಗಣದಲ್ಲಿದ್ದಾರೆ. ಸಂತೋಷ್ ಶೆಟ್ಟಿ ಅವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆ ಅಂಕಣ ಜೋಷಿ, ಸಂತೋಷ್ ಶೆಟ್ಟಿ, ಸಾಹಿತ್ಯ, ಹಾಡು ವಿ.ಮನೋಹರ್, ಗುರುಕಿರಣ್ ಈ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಹಿನ್ನೆಲೆ ಸಂಗೀತ ಸಂಜಯ್‌ ವಾಂದ್ರೇಕರ್, ಕ್ಯಾಮರಾ ಕೃಷ್ಣರಾಜ್ ಕೋಟ್ಯಾನ್, ಸಾಹಸ ಆನಂದ ಶೆಟ್ಟಿ, ಎಕ್ಸಿಕ್ಯೂಟಿವ್ ಪೊಡ್ಯುಸರ್ ಸತೀಶ್ ದುಬೆ, ಕ್ರಿಯೇಟಿವ್ ಡೈರಕ್ಟರ್ ಕ್ರಿಸ್ತಬೆಲ್ಲೆ ಡಿಸೋಜ, ಪ್ರೊಡಕ್ಷನ್ ಹೆಡ್ ಚಂದ್ರಕಾಂತ್ ಭಂಡಾರಿ.

Related Articles

Stay Connected

0FansLike
3,870FollowersFollow
0SubscribersSubscribe
- Advertisement -

Latest Articles