Saturday, July 20, 2024
Homeರಾಜಕೀಯಹನೆಹಳ್ಳಿ ಕೃಷ್ಣ ಕೊಲೆ ಪ್ರಕರಣ ಹಂತಕರ ಪತ್ತೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಹನೆಹಳ್ಳಿ ಕೃಷ್ಣ ಕೊಲೆ ಪ್ರಕರಣ ಹಂತಕರ ಪತ್ತೆಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಕಳೆದ ಮಾರ್ಚ್ 2 ರಂದು ಬ್ರಹ್ಮಾವರ ತಾಲೂಕು ಹನೆಹಳ್ಳಿ ನಿವಾಸಿ ಕೃಷ್ಣ ಕೊಲೆ ಪ್ರಕರಣದ ಹಂತಕರನ್ನು ಶೀಘ್ರ ಪತ್ತೆ ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಪ್ರಕರಣ ನಡೆದು ಮೂರುವರೆ ತಿಂಗಳು ಕಳೆದರೂ ಈವರೆಗೂ ಹಂತಕರ ಬಂಧನವಾಗಿಲ್ಲ, ಗ್ರಾಮೀಣ ಭಾಗದಲ್ಲಿ ಶೂಟೌಟ್ ನಡೆಸಿ ಕೊಲೆ ನಡೆದಿದ್ದು ಜನತೆ ಇದರಿಂದ ಆತಂಕಕ್ಕೀಡಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವ ಅಗತ್ಯವಿದೆ.

ಶೀಘ್ರದಲ್ಲಿಯೇ ಗೃಹ ಸಚಿವರನ್ನು ಭೇಟಿಯಾಗಿ ಉನ್ನತ ಮಟ್ಟದ ತನಿಖೆಗೆ ಮನವಿ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular